ಮಂಗಳೂರು: ತಲಕಲ ಧರ್ಮಚಾವಡಿ ಸ್ವಾಮೀಜಿಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
ಸುರತ್ಕಲ್:ಜು 22. ನೊಂದ ಜೀವಗಳಿಗೆ ದಾರಿದೀಪವಾಗಬೇಕಾಗಿದ್ದ ಸ್ವಾಮೀಜಿಯೋರ್ವರ ಮೃತದೇಹ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತರನ್ನು ತಲಕಲ ನೂತನವಾಗಿ ನಿರ್ಮಿಸಲಾದ ಧರ್ಮಚಾವಡಿಯ ಧರ್ಮದರ್ಶಿ , ಶ್ರೀ ಕೃಷ್ಣ ದೇವಿಪ್ರಸಾದ ತೀರ್ಥ ಸ್ವಾಮೀಜಿ(50) ಎಂದು ಗುರುತಿಸಲಾಗಿದೆ.
ಇವರ ಪೂರ್ವಶ್ರಮದ ಹೆಸರು ದೇವಿಪ್ರಸಾದ ಶೆಟ್ಟಿ. ವಿವಾಹಿತರಾಗಿದ್ದ ಇವರು, ಪತ್ನಿ ಪುತ್ರಿಯನ್ನು ಹೊಂದಿದ್ದಾರೆ. .5 ವರ್ಷದ ಹಿಂದೆ ಸನ್ಯಾತ್ವ ದೀಕ್ಷೆ ಪಡೆದುಕೊಂಡಿದ್ದರು. ಕುಟುಂಬದಿಂದ ಹೊರ ಬಂದ ಧಾರ್ಮಿಕ ಕೆಲಸ ಕಾರ್ಯದಲ್ಲಿ ತೊಡಗಿದ್ದ ಇವರು ತಲಕಳದ ಮಠದಲ್ಲೇ ವಾಸಿಸುತ್ತಿದ್ದರು. ಶುಕ್ರವಾರ ಮುಂಜಾನೆ ದೇವರಿಗೆ ಪೂಜೆ ಮಾಡಿದ್ದ ಬಳಿಕ ತಮ್ಮ ಕೋಣೆಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ತಲಕಲ ಸ್ವಾಮಿ ಮಾನಸಿಕವಾಗಿ ನೊಂದಿದ್ದು, ಇದರಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಅವರ ಸಾವಿನ ಬಗ್ಗೆ ಹಲವಾರು ಅನುಮಾನಗಳಿದ್ದು, ಈ ಕುರಿತು ಶಿಷ್ಯ ವೃಂದವನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.