ಉಡುಪಿ : ನಗರದಲ್ಲಿ ಮಗನೊಬ್ಬ ಕುಡಿದ ಅಮಲಿನಲ್ಲಿ ತಾಯಿಗೆ ನಿಂದಿಸಿದ ಎಂದು ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ಮಣಿಪಾಲದ ರಾ. ಹೆದ್ದಾರಿಯಿಂದ ಇಂದ್ರಾಳಿ ರೈಲ್ವೆ ನಿಲ್ದಾಣದ ಕಡೆಗೆ ಹೋಗುವ ರಸ್ತೆಯಲ್ಲಿ ಇಂದು ಸಂಜೆ ಸಂಭವಿಸಿದೆ.
ಕೊಲೆಯಾದ ವ್ಯಕ್ತಿ ತಮಿಳುನಾಡು ಮೂಲದ ಕುಮಾರ್ (32) ಎಂದು ತಿಳಿದು ಬಂದಿದೆ.
ಕುಟ್ಟಿ ಮತ್ತು ನವೀನ್ ಎಂಬುವವರು ಇಂದ್ರಾಳಿ ಬಾರ್ ನಿಂದ ಮದ್ಯಪಾನ ಮಾಡಿ ನಡೆದುಕೊಂಡು ಬರುವಾಗ ಕುಮಾರ್ ಎಂಬುವವನು ಕುಡಿದ ಅಮಲಿನಲ್ಲಿ ನವೀನ್ ಮತ್ತು ಕುಟ್ಟಿಯ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎನ್ನಲಾಗಿದೆ. ಮೂವರ ನಡುವೆ ಮಾತಿಗೆ ಮಾತು ಬೆಳೆದಿದೆ ಎಂದು ತಿಳಿಯಲಾಗಿದೆ.
ನಂತರ ನವೀನ್ ಮತ್ತು ಕುಟ್ಟಿ ಸೇರಿ ಮರದ ಸೊಂಟೆಯಿಂದ ಕುಮಾರನ ತಲೆಗೆ ಹೊಡೆದಾಗ ಆತನು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಮೃತದೇಹವನ್ನು ಉಡುಪಿ ಅಜ್ಜರ ಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಈ ಘಟನೆ ಸ್ಥಳಕ್ಕೆ ಉಡುಪಿ ನಗರ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.