Log In
BREAKING NEWS >
ಫೆ.14 ಮತ್ತು 15ರ೦ದು ಉಡುಪಿಯ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಧ್ವಜಸ್ತ೦ಭದ ಸ್ಥಾಪನಾ ಕಾರ್ಯಕ್ರಮವು ನಡೆಯಲಿದೆ.....

ಆಕಾಶ್ ಏರ್ ಹೆಸರಿನ ಹೊಸ ವಿಮಾನ ಹಾರಾಟ ಆರಂಭ – ಆ.7ರಿಂದ ಸಂಚಾರ

ನವದೆಹಲಿ:ಜು 2. ಆಕಾಶ್ ಏರ್ ಎಂಬ ಹೆಸರಿನ ಹೊಸ ವಿಮಾನ ಹಾರಾಟ ಆರಂಭವಾಗಲಿದ್ದು, ಆಗಸ್ಟ್ 7ರಂದು ಈ ವಿಮಾನ ತನ್ನ ಮೊದಲ ಸಂಚಾರ ಆರಂಭಿಸಲಿದೆ ಎಂದು ತಿಳಿದು ಬಂದಿದೆ.

ಆಕಾಶ್ ಏರ್ ಬೋಯಿಂಗ್ 737 ಮ್ಯಾಕ್ಸ್ ವಿಮಾನವು ಮುಂಬೈ- ಅಹಮದಾಬಾದ್ಮಾರ್ಗದಲ್ಲಿ ತನ್ನ ಮೊದಲ ಸೇವೆ ಆರಂಭಿಸಲಿದ್ದು, ಟಿಕೆಟ್ ಬುಕ್ಕಿಂಗ್ ಶುರುವಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಇನ್ನು ಆಗಸ್ಟ್ 7ರಿಂದ ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ವಾರಕ್ಕೊಮ್ಮೆ ಕಾರ್ಯನಿರ್ವಹಿಸುವ 28 ವಿಮಾನಗಳು ಹಾಗೂ ಆಗಸ್ಟ್ 13ರಿಂದ ಬೆಂಗಳೂರು-ಕೊಚ್ಚಿ ಮಾರ್ಗದಲ್ಲಿ 28 ವಿಮಾನಗಳ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದೆ ಎಂದು ತಿಳಿಸಿದೆ.

No Comments

Leave A Comment