Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

600 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಬಡವರಿಗೆ ದಾನ ಮಾಡಿದ ವೈದ್ಯ

ಲಕ್ನೋ:ಜು 21. ಉತ್ತರ ಪ್ರದೇಶದ ವೈದ್ಯರೊಬ್ಬರು ತಾವು ಗಳಿಸಿದ 600 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಬಡವರಿಗಾಗಿ ದಾನ ಮಾಡಿದ್ದಾರೆ.ಆ ಮೂಲಕ ಒಂದೊಂದು ರೂಪಾಯಿಯನ್ನೂ ಲೆಕ್ಕ ಹಾಕುವ ಇಂದಿನ ಕಾಲಘಟ್ಟದಲ್ಲಿ ಮಾದರಿಯಾಗಿದ್ದಾರೆ.

ಅರವಿಂದ ಕುಮಾರ್ ಗೋಯೆಲ್ ಎಂಬುವವರೇ ಆಸ್ತಿ ದಾನ ಮಾಡಿ ಮಾದರಿಯಾದ ವೈದ್ಯ. ಇವರು ತಮ್ಮ 50 ವರ್ಷದ ಸೇವೆಯಲ್ಲಿ ಗಳಿಸಿದ 600 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಬಡವರಿಗಾಗಿ ದಾನ ಮಾಡುವ ಸಲುವಾಗಿ ಉತ್ತರ ಪ್ರದೇಶ ಸರ್ಕಾರಕ್ಕೆ ಬರೆದುಕೊಟ್ಟಿದ್ದಾರೆ.

ವಿಶೇಷವೆಂದರೆ ಕಳೆದ 25 ವರ್ಷದ ಹಿಂದೆಯೇ ಆಸ್ತಿ ದಾನದ ನಿರ್ಧಾರಕ್ಕೆ ಬಂದಿದ್ದರಾದರೂ, ಕೆಲವು ಕಾರಣಗಳಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಆದರೆ ನನ್ನ ಆಸೆ ಈಗ ನೆರವೇರಿದೆ ಎನ್ನುತ್ತಾರೆ ವೈದ್ಯ ಅರವಿಂದ್ ಕುಮಾರ್.

ಲಾಕ್ ಡೌನ್ ಸಮಯದಲ್ಲಿ ಯೂ ಬಡವರಿಗೆ ಅರವಿಂದ್ ಕುಮಾರ್ ನೆರವಾಗಿದ್ದರು. ಮೊರಾದಾಬಾದ್ ನಲ್ಲಿ 50 ಹಳ್ಳಿಗಳನ್ನು ದತ್ತು ಪಡೆದು ಅಲ್ಲಿ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದರು. ಪತ್ನಿ, ಇಬ್ಬರು ಪುತ್ರರು,ಓರ್ವ ಪುತ್ರಿಯೊಂದಿಗಿನ ಚಿಕ್ಕ ಕುಟುಮಬ ಅವರದು. ಆದರೆ ಮನಸು ಮಾತ್ರ ದೊಡ್ಡದು ಎನ್ನುತ್ತಾರೆ ಇವರಿಂದ ಸೇವೆ ಪಡೆದವರು.

No Comments

Leave A Comment