Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಸುಳ್ಯ: ಕ್ಷುಲ್ಲಕ ವಿಚಾರಕ್ಕೆ ತಂಡದಿಂದ ಹಲ್ಲೆಗೊಳಗಾದ ಯುವಕ ಸಾವು

ಸುಳ್ಯ:ಜು 21 . ಕಳಂಜದಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ತಂಡದಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾದ ಮಸೂದ್(18) ಚಿಕಿತ್ಸೆ ಫಲಿಸದೆ ಗುರುವಾರ ಮಧ್ಯಾಹ್ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೂಲತಃ ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರು ನಿವಾಸಿಯಾಗಿದ್ದ ಮಸೂದ್ ತಿಂಗಳ ಹಿಂದೆ ಸುಳ್ಯದ ಕಳಂಜಕ್ಕೆ ಬಂದು ಸ್ಥಳೀಯವಾಗಿ ಕೂಲಿ ಕೆಲಸ ಮಾಡುತ್ತಿದ್ದರು.

ಜು. 19ರ ಸಂಜೆ ಸುಧೀರ ಎಂಬಾತನಿಗೆ ಮಸೂದ್‌ ಅಂಗಡಿ ಬಳಿ ತಾಗಿದ್ದು ಬಳಿಕ ಮಸೂದ್‌ ಸುಧೀರನಿಗೆ ಬಾಟಲಿ ತೋರಿಸಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಬಳಿಕ ಇದೇ ವಿಚಾರವಾಗಿ ಬಳಿಕ ರಾಜಿ ಪಂಚಾಯಿತಿಕೆಗೆಂದು ಮಸೂದ್ ನನ್ನು ಕರೆಸಿದ ಮಾತುಕತೆ ವೇಳೆ ಮಾತಿನ ಚಕಮಕಿ ನಡೆದು ಎಂಟು ಮಂದಿಯ ತಂಡ ಮಸೂದ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು

ಈ ವೇಳೆ ತಲೆಗೆ ಸೋಡಾ ಬಾಟಲಿಯ ಏಟು ಬಿದ್ದಿದ್ದರಿಂದ ಗಂಭೀರಾವಸ್ಥೆಗೆ ತಲುಪಿದ್ದ ಮಸೂದ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳದಿದ್ದಾರೆ.

ಪ್ರಕರಣ ಸಂಬಂಧ ಈಗಾಗಲೇ ಅಭಿಲಾಷ್‌, ಸುನಿಲ್‌, ಸುಧೀರ್‌, ಶಿವ, ರಂಜಿತ್‌, ಸದಾಶಿವ, ಜಿಮ್‌ ರಂಜಿತ್‌, ಭಾಸ್ಕರ ಎಂಬವರನ್ನು ಬಂಧಿಸಲಾಗಿದೆ.

ಸುಳ್ಯ: ಕ್ಷುಲ್ಲಕ ಕಾರಣಕ್ಕೆ ಹೊಡೆದಾಟ – ಎಂಟು ಮಂದಿಯ ಬಂಧನ

No Comments

Leave A Comment