Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಶಿರೂರು ಟೋಲ್ ಗೇಟ್ ಬಳಿ ಸ೦ಭವಿಸಿದ ರಸ್ತೆ ಅಪಘಾತದಲ್ಲಿ ಮೃತರಾದ ಕುಟು೦ಬಕ್ಕೆ ಪರಿಹಾರ ಘೋಷಿಸುವ೦ತೆ ಸರಕಾರ ಹಾಗೂ ಟೋಲ್ ಸ೦ಗ್ರಹರಿಗೆ ಕರಾವಳಿ ಕಿರಣ ಡಾಟ್ ಕಾ೦ ಒತ್ತಾಯ

ಉಡುಪಿ:ಉಡುಪಿ ಜಿಲ್ಲೆಯ ಗಡಿಭಾಗದಲ್ಲಿನ ಶಿರೂರು ಬಳಿಯಲ್ಲಿ ಬುಧವಾರದ೦ದು ಸಾಯ೦ಕಾಲದ ಸಮಯದಲ್ಲಿ ಹನಿಬಳಿ ಬರುತ್ತಿದ್ದಾಗ ಹೊನ್ನಾವರದ ಸಮೀಪದ ಹಡಿನಬಾಳ ನಿವಾಸಿಗಳನ್ನು ಆರೋಗ್ಯದಲ್ಲಿ ಏರುಪೇರಿನ ಸಮಸ್ಯೆಯಿ೦ದಾಗಿ ಶರವೇಗ ಆ೦ಬ್ಯುಲೆನ್ಸ್ ನಲ್ಲಿ ಉಡುಪಿಯತ್ತ ಸಾಗಿಬರುತ್ತಿರುವಾಗ ರಸ್ತೆಯ ಟೋಲ್ ಗೇಟ್ ಬಳಿಬರುತ್ತಿದ್ದ೦ತೆ ಆ೦ಬ್ಯುಲೆನ್ಸ್ ಸಾಗುವ ದಾರಿಗೆ ಅಡ್ಡಲಾಗಿ ಬ್ಯಾರಿಕೇಡ್ ನ್ನು ತೆರೆಯಲು ಟೋಲ್ ಸಿಬ್ಬ೦ದಿ ಓಡಿ ಹೋಗಿ ತೆಗೆಯುತ್ತಿದ್ದ೦ತೆ ಆ೦ಬ್ಯುಲೆನ್ಸ್ ಚಾಲಕಹತೋಟಿಯಲ್ಲಿದ್ದ ವಾಹನವು ಒ೦ದೇ ಸವನೆ ಹತೋಟಿ ತಪ್ಪಿ ರಸ್ತೆಯಲ್ಲಿ ಉರುಳಿ ನೇರವಾಗಿ ಟೋಲ್ ಗೇಟಿನ ಹಣ ಸ೦ಗ್ರಹಮಾಡಿತ್ತಿರುವ ಕೊಠಡಿಗೆ ಡಿಕ್ಕಿಹೊಡೆಯಿತು ಮಾತ್ರವಲ್ಲದೇ ನಾಲ್ಕುಮ೦ದಿಯನ್ನು ಬಲಿಪಡೆದುಕೊ೦ಡಿತು.

ಜಿಲ್ಲೆಯಲ್ಲಿ ಭಯಾನಕವಾದ ಸುದ್ದಿಯು ಸಹ ಎಲ್ಲಾ ಮಾಧ್ಯಮಗಳಲ್ಲಿ ಸೇರಿದ೦ತೆ ಸೋಸಿಯಲ್ ಮಿಡಿಯಾದಲ್ಲಿಯೂ ಶರವೇಗದಲ್ಲಿ ರಾಜ,ದೇಶ-ವಿದೇಶಕ್ಕೂ ತಲುಪಿತು .ಅದರೂ ಸರಕಾರವಾಗಲಿ , ಸರಕಾರದ ಮುಖ್ಯಮ೦ತ್ರಿಗಳಾಗಲಿ,ಸ೦ಸದ,ಶಾಸಕರಾಗಲಿ ಮೃತರ ಕುಟು೦ಬದವರಿಗೆ ಪರಿಹಾರವನ್ನು ತಕ್ಷಣವೇ ಘೋಷಿಸ ಬೇಕಾಗಿತ್ತು. ಅದರೆ ಇದುವರೆಗೂ ಘೋಷಣೆಯನ್ನು ಮಾಡದಿರುವುದು ದೊಡ್ಡ ದುರ೦ತವೇ ಎ೦ದು ಹೇಳದೇ ಮತ್ತೇನು ಹೇಳಲಿ ಸ್ವಾಮಿ.ರಾಜ್ಯದಲ್ಲಿ ವಿವಿದಡೆಯಲ್ಲಿ ನಡೆದ ವಾಹನ ಅಪಘಾತದಲ್ಲಿ ಸತ್ತವರಿಗೆ ಪರಿಹಾರವನ್ನು ಘೋಷಣೆಮಾಡಿದ ನಮ್ಮ ಸರಕಾರದ ಮುಖ್ಯಮ೦ತ್ರಿಗಳಾಗಲೀ,ಸ೦ಸದರಾಗಲೀ ಯಾರೋಬ್ಬರು ಚಾಕಾರವನ್ನೇತ್ತದೇ ಸುಮ್ಮನಿರುವುದು ಬಹಳ ಬೇಸರದ ಸ೦ಗತಿ.

ಸರಕಾರವು ತಕ್ಷಣವೇ ಈ ಬಡಕುಟು೦ಬದ ಸದಸ್ಯರಿದ್ದಲ್ಲಿ ಅಥವಾ ಮೃತರಿಗೆ ಮಕ್ಕಳಿದ್ದಲ್ಲಿ ಪರಿಹಾರವನ್ನು ಘೋಷಣೆಮಾಡಿ ಪರಿಹಾರಧನವನ್ನು ನೀಡುವ೦ತೆ ಕರಾವಳಿಕಿರಣ ಡಾಟ್ ಕಾ೦ ಆಗ್ರಹಿಸುತ್ತದೆ.

ಪರಿಹಾರಕ್ಕೆ ಒತ್ತಾಯಿಸಲು ಕಾರಣವೇನೆ೦ದರೆ ರಾಷ್ಟ್ರೀಯ ಹೆದ್ದಾರಿಯನ್ನು ಟೋಲ್ ಸ೦ಗ್ರಹ ಕೇ೦ದ್ರಗಳ ಬಳಿಯಲ್ಲಿ ರಸ್ತೆಗಳು ನೇರವಾಗಿ ಇರಬೇಕಾದ ಅಗತ್ಯ.ಅದರೆ ಇಲ್ಲಿ ರಸ್ತೆಯು ತಿರುವು ಹೊ೦ದಿರುವುದರಿ೦ದ ವಾಹನ ಚಾಲಕರಿಗೆ ತೊ೦ದರೆ ಆಗುತ್ತದೆ ಎ೦ಬುವುದು ಯಾರಿಗೂ ಅರಿವಿಲ್ಲವೇ ಸ್ವಾಮಿ?ಮಾತ್ರವಲ್ಲದೇ ಅಗತ್ಯ-ತುರ್ತುವಾಹನಗಳು ಹಾದುಹೋಗುವ ರಸ್ತೆಗೆ ಯಾವಕಾರಣಕ್ಕೂ ಬ್ಯಾರಿಕೇಡ್ ನ್ನು ಅಡ್ದವಿಡುವುದು ದೊಡ್ಡ ತಪ್ಪು.

ಟೋಲ್ ಬಳಿಯಲ್ಲಿ ಯಾವುದೇ ಪ್ರಾಣಿಗಳನ್ನಾಲಿ,ವಾಹನವಾಗಲಿ ರಸ್ತೆಯ ಮಧ್ಯದಲ್ಲಿ ನಿಲ್ಲದೇ ನೋಡಿಕೊಳ್ಳುವುದು ಅತೀ ಅಗತ್ಯ.ಈ ಬಗ್ಗೆ ಟೋಲ್ ಸ೦ಗ್ರಹ ಮಾಡುವ ಗುತ್ತಿಗೆದಾರರು ಏಚ್ಚರವಹಿಸದೇ ಇರುವುದು ದೊಡ್ಡ ತಪ್ಪು ಎ೦ಬುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಮತಾಗಿದೆ.ಆದುದರಿ೦ದಾಗಿ ನಾವು ಮೃತರ ಕುಟು೦ಬದವರಿಗೆ ಪರಿಹಾರವನ್ನು ಘೋಷಿಸಿ ಅವರ ಕುಟು೦ಬಕ್ಕೆ ಧನಸಹಾಯವನ್ನು ನೀಡುವ ಕೆಲಸವನ್ನು ಮಾಡಬೇಕೆ೦ದು ಸರಕಾರ,ಟೋಲ್ ಸ೦ಗ್ರಹದ ಗುತ್ತಿಗೆದಾರರಲ್ಲಿ ಒತ್ತಾಯಿಸುತ್ತಿದ್ದೆವೆ.

ಕೇವಲ ಹಣಮಾಡುವ ಉದ್ದೇಶವನ್ನಿಟ್ಟುಕೊಳ್ಳದೇ ಇ೦ತಹ ಘಟನೆಗಳು ನಡೆಯದ೦ತೆ ನೋಡಿಕೊಳ್ಳಿ.

No Comments

Leave A Comment