Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....ಮಾ.21,22 ಕಾಪು ಸುಗ್ಗಿ ಮಾರಿಪೂಜೆ ದಿನ ನಿಗದಿ....

ಸುಳ್ಯ : ಹಲ್ಲೆ ಪ್ರಕರಣ : ಪೊಲೀಸರಿಂದ 8 ಮಂದಿ ಆರೋಪಿಗಳ ಬಂಧನ

ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸಮೀಪ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿ ಅವರ ಮನೆಗೆ ಹೋಗಿ ಬೆದರಿಕೆ ಹಾಕಿದ ಪ್ರಕರಣ ಎಂಟು ಮಂದಿ ಆರೋಪಿಗಳನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳು 1) ಅಭಿಲಾಷ್ 2) ಸುನೀಲ್, 3) ಸುಧೀರ್, 4) ಶಿವ, 5) ರಂಜಿತ್, 6) ಸದಾಶಿವ  7) ಜಿಮ್ ರಂಜಿತ್, 8) ಭಾಸ್ಕರ  ಎಂದು ತಿಳಿಯಲಾಗಿದೆ.

ಘಟನೆ ಸಂಭವಿಸಿದ ಸ್ಥಳ : ಸುಳ್ಯ ತಾಲೂಕು ಕಳಂಜ ಗ್ರಾಮದ ವಿಷ್ಣು ನಗರ ಎಂಬಲ್ಲಿ ನಡೆದಿದೆ.

ಪಿರಿಯಾದಿದಾರರ ಹೆಸರು: ಇಬ್ರಾಹಿಂ ಶಾನೀಫ್ 24 ವರ್ಷ, ತಂದೆ ಹನೀಫ್ ಕಳಂಜ , ವಾಸ; ಪೆಲತ್ತಡ್ಕ ಮನೆ ಪೆರುವಾಜೆ ಗ್ರಾಮ, ಸುಳ್ಯ ತಾಲೂಕು.

ಪ್ರಕರಣದ ಸಾರಾಂಶ : ಈ ಪ್ರಕರಣದ ಸಾರಾಂಶವನೆಂದರೆ ಕಾಸರಗೋಡು ತಾಲೂಕು ಮೊಗ್ರಾಲ್ ಪುತ್ತೂರು ವಾಸಿ ಮಸೂದ್ ಎಂಬಾತನು ಸುಮಾರು 1 ತಿಂಗಳ ಹಿಂದೆ ಸುಳ್ಯ ತಾಲೂಕು ಕಳಂಜ ಗ್ರಾಮದ ಕಳಂಜದಲ್ಲಿರುವ ಅಜ್ಞ ಅಬ್ಬು ಮುಕ್ತಿ ಎಂಬವರ ಮನೆಗೆ ಬಂದವನು ಸ್ಥಳೀಯವಾಗಿ ಕೂಲಿ ಕೆಲಸ ಮಾಡಿಕೊಂಡಿದ್ದು, ಫಿರ್ಯಾದಿದಾರರು ತನ್ನ ಅಜ್ಜಿ ಮನೆಯಾದ ಕಳಂಜದಲ್ಲಿರುವ ಸಮಯ ಏಷ್ಟು ನಗರ ಬಸ್ಸು ನಿಲ್ದಾಣದ ಬಳಿ ಜನ ಗುಂಪು ಸೇರಿರುವುದನ್ನು ಕಂಡು ರಸ್ತೆಗೆ ಬಂದಾಗ ಅಲ್ಲಿ ಪರಿಚಯದ ಅಭಿಲಾಶ್, ಸುನೀಲ್, ಸುಧೀರ್, ಶಿವ, ರಂಜಿತ್, ಸದಾಶಿವ, ಜಿಮ್ ರಂಜಿತ್ ಮತ್ತು ಭಾಸ್ಕರ ರವರು ಇದ್ದು, ಅವರು ಫಿರ್ಯಾದಿದಾರರನ್ನು ಕರೆದು ಸಂಜೆಯ ವೇಳೆ ಸುಧೀರನಿಗೆ ಮಸೂದನು ಅಂಗಡಿಯ ಬಳಿ ತಾಗಿದ ವಿಚಾರದಲ್ಲಿ ಪರಸ್ಪರ ಹೊಡೆದಾಡಿಕೊಂಡು ಬಳಿಕ ಮಸೂದನು ಸುಧೀರನಿಗೆ ಬಾಟಲ್ ತೋರಿಸಿ ಬೆದರಿಕೆ ಹಾಕಿರುವುದಾಗಿ ಹೇಳಿ ನೀನು ಮಸೂದನನ್ನು ಕರೆದುಕೊಂಡು ಬಾ. ನಾವು ಮಾತನಾಡಿ ಮುಗಿಸುವ ಎಂದು ಹೇಳಿದ್ದು, ಅದರಂತೆ ಫಿರ್ಯಾದಿದಾರರು ಮಸೂದ್ ನ ಅಜ್ಜಿ ಮನೆಗೆ ಹೋಗಿ ಆತನನ್ನು ನಿಮ್ಮ ನಗರಕ್ಕೆ ಕರೆದುಕೊಂಡು ಬಂದಾಗ ಸಮಯ ಸುಮಾರು ರಾತ್ರಿ 11-00 ಗಂಟೆಗೆ ಆರೋಪಿತರು ಒಟ್ಟು ಸೇರಿ ಏಕಾ ಏಕಿ ಮಸೂದನಿಗೆ ಕೈಯಿಂದ ಹಲ್ಲೆ ಮಾಡಲು ಪ್ರಾರಂಭಿಸಿದ್ದು.

ಆಗ ಫಿರ್ಯಾದಿದಾರರು ಹೊಡೆಯಬೇಡಿ ಎಂದು ಹೇಳಿ ಮಸೂದನನ್ನು ಗಟ್ಟಿಯಾಗಿ ತಬ್ಬಿಕೊಂಡಾಗ ದೊಡಾಟವಾಗಿ ಫಿರ್ಯಾದಿದಾರರು ಮತ್ತು ಮಸೂದನು ನೆಲಕ್ಕೆ ಬಿದ್ದಿದ್ದು ಬಿದ್ದಲ್ಲಿಗೆ ಅವರೆಲ್ಲರೂ ಕಾಲಿನಿಂದ ತುಳಿದು ಅವರ ಪೈಕಿ ಅಭಿಲಾಶನು ಅಲ್ಲಿ ಬಿದ್ದುಕೊಂಡಿದ್ದ ಖಾಲಿ ಜೂಸ್ ಬಾಟಲಿಯಿಂದ ಮಸೂದನ ತಲೆಗೆ ಬಲವಾಗಿ ಹೊಡೆದನು. ಆಗ ಫಿರ್ಯಾದಿದಾರರು ಮಸೂದನಲ್ಲಿ ಓಡಿ ತಪ್ಪಿಸಿಕೊಳ್ಳಲು ಹೇಳಿದಂತೆ ಮಸೂದನು ಅಲ್ಲಿಂದ ಓಡಿ ಹೋಗಿದ್ದು, ಬಳಿಕ ಪಿರ್ಯಾದಿದಾರರು ಮತ್ತು ಅವರ ಕಡೆಯವರು ಮಸೂದನನ್ನು ಹುಡುಕುತ್ತಿರುವ ಸಮಯ ದಿನಾಂಕ 20.07 2022 ರಂದು ರಾತ್ರಿ 1-30 ಗಂಟೆಗೆ ಅಲ್ಲಿಯೇ ಅಬೂಬಕ್ಕರ್ ಎಂಬವರ ಬಾವಿಯ ಬಳಿ ಮಸೂದನು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದು, ಅವನನ್ನು ಉಪಚರಿಸಿ ಕಾರಿನಲ್ಲಿ ಸುಳ್ಯ, ಕೆ.ವಿ.ಜಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ, ಮಂಗಳೂರಿಗೆ ಹೋಗುವಂತೆ ಸೂಚಿಸಿದಂತೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಮಸೂದನಿಗೆ ತೀವು ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಿರುವುದಾಗಿದೆ.

ಈ ಘಟನಗೆ ಕಾರಣವೆನೆಂದರೆ ನಿನ್ನೆ ದಿನ ಸಂಜೆ ಮಸೂದನು ಅಂಗಡಿ ಬಳಿ ಸುಧೀರನಿಗೆ ತಾಗಿ ಹಲ್ಲೆ ಮಾಡಿ ಬೆದರಿಕೆ ಒಡ್ಡಿದ ದ್ವೇಷದಿಂದ ಸುಧೀರನು ಆತನ ಸ್ನೇಹಿತರನ್ನು ಒಟ್ಟುಗೂಡಿಸಿ ಅವರಲ್ಲ ಮಸೂದನನ್ನು ಕೊಲೆ ಮಾಡುವ ಉದ್ದೇಶದಿಂದ ಫಿರ್ಯಾದಿದಾರರಲ್ಲಿ ಮಸೂದನನ್ನು ಮನೆಯಿಂದ ಕರೆಸಿ ಆತನಿಗೆ ಕೈಯಿಂದ ಮತ್ತು ಕಾಲಿನಿಂದ ಹಲ್ಲೆ ನಡೆಸಿ ಖಾಲಿ ಜೂಸ್ ಬಾಟಲಿಯಿಂದ ಮಸೂದನ ತಲೆಗೆ ಬಲವಾಗಿ ಹೊಡೆದಿರುವುದಾಗಿದೆ ಎಂಬಿತ್ಯಾದಿ.

No Comments

Leave A Comment