Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....

ಡೋಪ್ ಟೆಸ್ಟ್ : ಧನಲಕ್ಷ್ಮಿ,​ ಐಶ್ವರ್ಯಾ ಕಾಮನ್​ವೆಲ್ತ್​ ಗೇಮ್ಸ್​ನಿಂದ ಔಟ್​

ನವದೆಹಲಿ:ಜು 20. ಬರ್ಮಿಂಗ್ ​ಹ್ಯಾಮ್​ನಲ್ಲಿ ನಡೆಯಲಿರುವ ಕಾಮನ್​ವೆಲ್ತ್​ ಗೇಮ್ಸ್​ಗಾಗಿ ನಡೆಸಲಾಗುತ್ತಿರುವ ಡೋಪಿಂಗ್​ ಪರೀಕ್ಷೆಯಲ್ಲಿ ಅಗ್ರ ಓಟಗಾರ್ತಿ ಎಸ್.ಧನಲಕ್ಷ್ಮಿ, ರಾಷ್ಟ್ರೀಯ ದಾಖಲೆ ರಚಿಸಿದ ಟ್ರಿಪಲ್ ಜಂಪರ್ ಐಶ್ವರ್ಯಾ ಬಾಬು ವಿಫಲರಾಗಿದ್ದು ಕಾಮನ್​ವೆಲ್ತ್ ಗೇಮ್ಸ್‌ನಿಂದ ಹೊರಬಿದ್ದಿದ್ದಾರೆ.

ಬರ್ಮಿಂಗ್​ಹ್ಯಾಮ್ ಕಾಮನ್​ವೆಲ್ತ್​ ಗೇಮ್ಸ್ ಗಾಗಿ 36 ಸದಸ್ಯರ ಭಾರತೀಯ ಅಥ್ಲೆಟಿಕ್ಸ್ ತಂಡದಲ್ಲಿ ಸ್ಥಾನ ಪಡೆದಿರುವ 24 ವರ್ಷದ ಧನಲಕ್ಷ್ಮಿ, ವಿಶ್ವ ಅಥ್ಲೆಟಿಕ್ಸ್‌ನ ಅಥ್ಲೆಟಿಕ್ಸ್ ಇಂಟೆಗ್ರಿಟಿ ಯುನಿಟ್ (AIU) ವಿದೇಶದಲ್ಲಿ ನಡೆಸಿದ ಡೋಪ್ ಪರೀಕ್ಷೆಯಲ್ಲಿ ನಿಷೇಧಿತ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ.

ಕಳೆದ ತಿಂಗಳು ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಅಂತರ್ ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನಾಡಾ ಅಧಿಕಾರಿಗಳು 24 ವರ್ಷದ ಟ್ರಿಪಲ್ ಜಂಪರ್ ಐಶ್ವರ್ಯಾ ಬಾಬು ಅವರ ಸ್ಯಾಂಪಲ್ ಪಡೆದುಕೊಂಡಿದ್ದು, ಇವರು ಕೂಡಾ ಡೋಪ್ ಟೆಸ್ಟ್ ನಲ್ಲಿ ವಿಫಲರಾಗಿದ್ದಾರೆ.

ಅಮೆರಿಕದಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಶಿಪ್‌ಗೂ ಧನಲಕ್ಷ್ಮಿ ಆಯ್ಕೆಯಾಗಿದ್ದರು. ಆದರೆ ವೀಸಾ ಸಮಸ್ಯೆಗಳಿಂದಾಗಿ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ. ಇದೀಗ ಡೋಪಿಂಗ್​ ನಲ್ಲಿ ವಿಫರಾಗಿರುವ ಅವರು , ಕಾಮನ್​ವೆಲ್ತ್​ನಿಂದಲೂ ಹೊರಬಿದ್ದಿದ್ದಾರೆ.

No Comments

Leave A Comment