Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ವಕೀಲೆ ಮನೆಯಲ್ಲಿ ಹಾಡಹಗಲೇ ಕಳ್ಳತನ ನಡೆಸಿದ ಕಳ್ಳರು : 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ಉಡುಪಿ : ನಗರದ ಕೋರ್ಟ್‍ನ ಹಿಂಬದಿಯಲ್ಲಿರುವ ವಕೀಲೆಯೋರ್ವರ ಮನೆಗೆ ಮಂಗಳವಾರ ಜು.19ರ ಬೆಳಿಗ್ಗೆ 10:45 ರಿಂದ ಮದ್ಯಾಹ್ನ 2:10ರ ನಡುವಿನ ಸಮಯದಲ್ಲಿ ಕಳ್ಳರು ನುಗ್ಗಿ ಕಳ್ಳತನ ಎಸಗಿದ್ದಾರೆ ಎಂದು ತಿಳಿದು ಬಂದಿದೆ ‌

ಉಡುಪಿಯ ವಕೀಲೆ ವಾಣಿ ವಿ ರಾವ್ ಮನೆಯಲ್ಲಿ ಕಳ್ಳತನ ನಡೆದಿದೆ ಎಂದು ತಿಳಿಯಲಾಗಿದೆ.

ಹಾಡಹಗಲೇ ಮನೆಗೆ ನುಗ್ಗಿ ಕೋಣೆಯಲ್ಲಿನ ಕಪಾಟಿನ ಲಾಕರ್ನಲ್ಲಿ ಇದ್ದ ಪರ್ಸ್‍ನೊಳಗಿಂದ 45,000ರೂ. ನಗದು, ವ್ಯಾನಿಟಿ ಬ್ಯಾಗ್ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ಬಟ್ಟೆ ಬರೆಗಳನ್ನು ಕಳ್ಳತನ ಗೈದು ಪರಾರಿಯಾಗಿದ್ದಾರೆ.

ಬ್ಯಾಗ್‌ನಲ್ಲಿರಿಸಿದ್ದ 5 ಪವನ್ ತೂಕದ ಪಚ್ಚೆಕಲ್ಲು ಇರುವ ಚಿನ್ನದ ಬ್ರೇಸ್‌ಲೇಟ್‌, ಎರಡು 6 ಪವನ್‌ ತೂಕದ ಮುತ್ತಿನ ಬಳೆ, ಎರಡು 5½ ಪವನ್‌ ತೂಕದ ಚಿನ್ನದ ಖಡಗ ಬಳೆಗಳು, 6 ಪವನ್‌ ತೂಕದ ಚಿನ್ನದ ಸರ ಮತ್ತು 1 ಪವನ್‌ ತೂಕದ ಪೆಂಡೆಂಟ್‌, 6 ಪವನ್‌ ತೂಕದ ಮಲ್ಲಿಗೆ ಮೊಗ್ಗು ಚಿನ್ನದ ಸರ, 1½ ಪವನ್‌ ತೂಕದ ಚಿನ್ನದ ಸರ ಮತ್ತು ನೀಲಿ ಹರಳಿನ ಪೆಂಡೆಂಟ್‌, ಎರಡು ಜೊತೆ ನೀಲಿ ಕಲ್ಲಿನ ಬೆಂಡೋಲೆ ಮತ್ತು ಕರಮಣಿ ಹರಳಿನ ಬೆಂಡೋಲೆ, ಜುಮ್ಕಿ, ಗ್ರೇನೆಟ್ ಹರಳಿನ ನೆಕ್ಲೇಸ್, ಗ್ರೇನೆಟ್ ಹರಳಿನ ಬಳೆ, ಚಿನ್ನದ ನಾಣ್ಯ, ನಾಲ್ಕು ರೇಷ್ಮೇ ಸೀರೆ ಮತ್ತು ಒಂದು ಸಾಧಾರಣಾ ಸೀರೆಯನ್ನು ಕಳವುಗೈಯಲಾಗಿದೆ. ಕಳವಾಗಿರುವ ಸೊತ್ತುಗಳ ಒಟ್ಟು ಮೌಲ್ಯ 25 ಲಕ್ಷ ಆಗಿದೆ ಎಂದು ಅಂದಾಜು ಮಾಡಲಾಗಿದೆ. ‌

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

No Comments

Leave A Comment