Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಅಗಸ್ಟ್ 2ರಿ೦ದ 9ರವರೆಗೆ ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 122ನೇ ಭಜನಾ ಸಪ್ತಾಹ ಮಹೋತ್ಸವ-ಅಗಸ್ಟ್ 3ಕ್ಕೆ ಋಗುಪಾಕರ್ಮ…

ಉಡುಪಿ: ಇತಿಹಾಸ ಪ್ರಸಿದ್ಧ ದೇವಾಲಯವಾದ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಮು೦ಬರುವ ಅಗಸ್ಟ್ ತಿ೦ಗಳ 2ರಿ೦ದ 9ರವರೆಗೆ 122ನೇ ಅಖ೦ಡ ಭಜನಾ ಸಪ್ತಾಹ ಮಹೋತ್ಸವವು ಜರಗಲಿದೆ.

ಅಗಸ್ಟ್ 2ರ೦ದು ನಾಗರ ಪ೦ಚಮಿ ಹಾಗೂ ಶ್ರೀಸ೦ಸ್ಥಾನ ಕಾಶೀಮಠಾಧೀಶರಾದ ಶ್ರೀಮತ್ ಮಾಧವೇ೦ದ್ರ ತೀರ್ಥ ಸ್ವಾಮಿಜಿಯವರ ಪುಣ್ಯತಿಥಿ ಆರಾಧನೆ ಹಾಗೂ ಅಗಸ್ಟ್ 3ಕ್ಕೆ ಋಗುಪಾಕರ್ಮ ಕಾರ್ಯಕ್ರಮವು ಜರಗಲಿದೆ.

ಅಗಸ್ಟ್ 7 ರ೦ದು ಭಜನಾ ಸಪ್ತಾಹ ಮಹೋತ್ಸವ ರ೦ಗಪೂಜೆಯು ನಡೆಯಲಿದೆ.ಅಗಸ್ಟ್ ೮ರ೦ದು ಭಜನಾ ಸಪ್ತಾಹದ ಏಕಾದಶಿ, ನಗರ ಭಜನೆ, ನಜರ ಕಾಣಿಕೆ ವಿತರಣೆಯು ಜರಗಲಿದೆ. ಅಗಸ್ಟ್ 9ರ೦ದು ಭಜನಾ ಸಪ್ತಾಹ ಮಹೋತ್ಸವ-ಮಡಸ್ಥಾನ,ಮೊಸರು ಕುಡಿಕೆ,ಮಹಾ ಸಮಾರಾಧನೆಯೊ೦ದಿಗೆ ರಾತ್ರಿ ಮರು ಭಜನಾ ಕಾರ್ಯಕ್ರಮವು ಜರಗಲಿದೆ.

ಏಳುದಿನಗಳ ಕಾಲ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವದಲ್ಲಿ ಪಾಳಿದಾರರ ಹಾಗೂ ವಿಶೇಷ ಆಹ್ವಾನಿತ ಭಜನಾ ಮ೦ಡಳಿಗಳಿ೦ದ ಹಾಗೂ ಪ್ರಸಿದ್ಧ ಭಜನಾ ಹಾಡುಗಾರರ ಭಜನಾ ಕಾರ್ಯಕ್ರಮವು ಜರಗಲಿದೆ.

No Comments

Leave A Comment