ಬೆಳ್ತಂಗಡಿ: ಚಾರ್ಮಾಡಿ ಘಾಟ್‌ನ ಎರಡನೇ ತಿರುವಿನ ಬಳಿ ರಸ್ತೆ ಬಿರುಕು – ವಾಹನ ಸಂಚಾರ ನಿರ್ಬಂಧ
ಬೆಳ್ತಂಗಡಿ:ಜು 18. ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟ್ ಎರಡನೇ ತಿರುವಿನ ರಸ್ತೆಯ ಮೋರಿಯೊಂದು ಬಿರುಕು ಬಿಟ್ಟಿರುವ ಘಟನೆ ಸೋಮವಾರ ನಡೆದಿದೆ.
ಬಿರುಕು ಬಿಟ್ಟ ಪ್ರದೇಶದಲ್ಲಿ ಬ್ಯಾರಿಕೆಡ್ ಅಳವಡಿಸಲಾಗಿದ್ದು, ಮರಳು ಮಿಶ್ರಿತ ಕಲ್ಲುಗಳನ್ನು ಹಾಕಿ ಹಾಕಿ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಆದರೆ ಸಂಚಾರಕ್ಕೆ ಯಾವುದೇ ಸಮಸ್ಯೆ ಇಲ್ಲ.
ಇನ್ನು ಕುಸಿತ ಗೊಂಡಿರುವ ಇನ್ನೊಂದು ಭಾಗದಲ್ಲಿ ಕಂದಕ ಇರುವ ಕಾರಣ ಬಸ್, ಲಾರಿ ಮೊದಲಾದ ಘನ ವಾಹನಗಳು ಸಂಚರಿಸುವಾಗ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.