ಉಡುಪಿ ಮೋಟರ್ಸ್‌ನಲ್ಲಿ ಏಕಕಾಲದಲ್ಲಿ 25 ಯಮಹಾ ಫ್ಯಾಸಿನೋ ಮಾರಾಟ
ಉಡುಪಿ: ಯಮಹಾ ದ್ವಿಚಕ್ರ ವಾಹನಗಳ ಅಧಿಕೃತ ಡೀಲರ್ ಗುಂಡಿಬೈಲಿನಲ್ಲಿರುವ ಉಡುಪಿ ಮೋಟರ್ಸ್‌ನಿಂದ ಏಕಕಾಲದಲ್ಲಿ 25 ಯಮಹಾ ಫ್ಯಾಸಿನೊ ಸ್ಕೂಟರ್ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಯಮಹಾ ಫ್ಯಾಸಿನೋ ಸ್ಕೂಟರ್ ಜಗತ್ತಿನ ಪ್ರಪ್ರಥಮ ಹೈಬ್ರೀಡ್ ಸ್ಕೂಟರ್ ಆಗಿದ್ದು, ಅತ್ಯಧಿಕ ಮೈಲೇಜ್ ನೀಡುತ್ತಿರುವುದರಿಂದ ಗ್ರಾಹಕರಿಂದ ಬೇಡಿಕೆ ಹೊಂದಿದೆ.
ಸಾಯಿ ಗಣೇಶ್ ಸೌಹಾರ್ದ ಕ್ರೆಡಿಟ್ ಕೊ-ಆಪರೇಟಿವ್ ಲಿಮಿಟೆಡ್‌ನ ಅಧ್ಯಕ್ಷ ಸಿ.ಆರ್. ಪೈ ಹಾಗೂ ಉಪಾಧ್ಯಕ್ಷ ಎಚ್.ಆರ್. ಶೆಣೈ ಅವರು ಗ್ರಾಹಕರಾದ ಆರ್.ಆರ್. ಬ್ರದರ್ಸ್ ಸಂಸ್ಥೆಯ ಕ್ಯಾರೊನ್ ರೋಡ್ರಿಗಸ್ ಹಾಗೂ ಕ್ಲೈವ್ ರೋಡ್ರಿಗಸ್ ಅವರಿಗೆ ಸ್ಕೂಟರ್‌ಗಳನ್ನು ಹಸ್ತಾಂತರಿಸಿದರು.
ನ೦ತರ ಅವರು ಮಾತನಾಡಿ ಆಧುನಿಕ ತಂತ್ರಜ್ಞಾನ, ಕಡಿಮೆ ಮೈಂಟೆನೆನ್ಸ್, ಹಾಗೂ ಅತ್ಯಧಿಕ ಮೈಲೇಜ್ ಕಾರಣ ತಾವು ಏಕ ಕಾಲದಲ್ಲಿ 25 ಯಮಹಾ ಸ್ಕೂಟರ್ ಖರೀದಿಸುತ್ತಿರುವುದಾಗಿ ತಿಳಿಸಿದರು.
ಉಡುಪಿ ಮೋಟರ್ಸ್‌ನ ಪಾಲುದಾರರಾದ ಟೈಟಸ್ ಸುವಾರಿಸ್ ಸ್ವಾಗತಿಸಿದರು. ಇನ್ನೋರ್ವ ಪಾಲುದಾರ ಜಯಪ್ರಕಾಶ್ ಭಂಡಾರಿ ವಂದಿಸಿದರು. ಉಡುಪಿ ಮೋಟರ್ಸ್‌ನ ಎಚ್.ಆರ್. ಮ್ಯಾನೇಜರ್ ಪ್ರತೀಕ್ಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ ಮೋಟರ್ಸ್‌ನಲ್ಲಿ ಸ್ಕೂಟರ್‌ಗಳ ಬೃಹತ್ ಸಾಲ ಹಾಗೂ ವಿನಿಮಯ ಮೇಳ ನಡೆಯುತ್ತಿದ್ದು, ರೂ. 1,500 ಕ್ಯಾಷ್ ಬ್ಯಾಕ್, ಉಚಿತ ಹೆಲ್ಮೆಟ್ ಸಹಿತ ವಿಶೇಷ ಆಫರ್‌ಗಳಿವೆ. ಜೊತೆಗೆ ವಿನಿಮಯ ಕೊಡುಗೆಗಳು, ಕಡಿಮೆ ಮುಂಗಡ ಪಾವತಿ ಸ್ಕೀಮ್, ಸುಲಭ ಕಂತು ಸಾಲ ಸೌಲಭ್ಯಗಳು ಲಭ್ಯವಿವೆ.