Log In
BREAKING NEWS >
ಅಪಾರ ಭಕ್ತಜನಸ್ತೋಮದ ನಡುವೆ ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 122ನೇ ಭಜನಾ ಸಪ್ತಾಹ ಮಹೋತ್ಸವದ "ರ೦ಗಪೂಜೆ" ಸ೦ಪನ್ನ...ಏಕಾದಶಿಯ ಪ್ರಯುಕ್ತ ಸೋಮವಾರದ೦ದು ಸ೦ಜೆ 5ಗ೦ಟೆಗೆ ನಗರಭಜನೆ ಆರ೦ಭ...

ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಫೈನಲ್: ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಪಿ ವಿ ಸಿಂಧು

ಸಿಂಗಾಪುರ: ಚೀನಾದ ಆಟಗಾರ್ತಿ ವಾಂಗ್ ಝಿ ಯಿ ಅವರನ್ನು ಅಂತಿಮ ಸುತ್ತಿನಲ್ಲಿ ಮಣಿಸುವ ಮೂಲಕ ಎರಡು ಬಾರಿ ಒಲಿಂಪಿಕ್ ಪದಕ ಗೆದ್ದಿರುವ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು(P V Sindhu) ಸಿಂಗಾಪುರ ಓಪನ್ ಸೂಪರ್ 500 ಮಹಿಳೆಯರ ಸಿಂಗಲ್ಸ್ ನಲ್ಲಿ (Singapur open 2022) ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಇಂದು ಸಿಂಗಾಪುರದಲ್ಲಿ ಮುಕ್ತಯವಾದ ತೀವ್ರ ಪೈಪೋಟಿಯ ಅಂತಿಮ ಪಂದ್ಯದಲ್ಲಿ ಸಿಂಧು ಅವರು ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು 22 ವರ್ಷದ ವಾಂಗ್ ಝಿ ಯಿ ಅವರನ್ನು 21-9, 11-21, 21-15 ಸೆಟ್ ಗಳಿಂದ ಮಣಿಸಿದ್ದಾರೆ.

ಇದೇ ಜುಲೈ 28ರಂದು ಬಿರ್ಮಿಂಗ್ಯಾಮ್ ನಲ್ಲಿ ಆರಂಭವಾಗಲಿರುವ ಕಾಮನ್ ವೆಲ್ತ್ ಗೇಮ್ ನಲ್ಲಿ ಪಿ ವಿ ಸಿಂಧು ಅವರಿಗೆ ಈ ಗೆಲುವು ಇನ್ನಷ್ಟು ಹುರುಪು ನೀಡಲಿದೆ. ಈ ವರ್ಷದಲ್ಲಿ ಸಿಂಧು ಅವರು ಪ್ರಶಸ್ತಿ ಗೆಲ್ಲುತ್ತಿರುವುದು ಇದು ಮೂರನೇ ಬಾರಿ. ಈ ಹಿಂದೆ ಸೈಯದ್ ಮೋದಿ ಇಂಟರ್ನಾಷನಲ್ ಮತ್ತು ಸ್ವಿಸ್ ಓಪನ್ ನಲ್ಲಿ ಸೂಪರ್ 300 ಪ್ರಶಸ್ತಿಗಳನ್ನು ಗೆದ್ದಿದ್ದರು. ಎರಡು ಒಲಿಂಪಿಕ್ ಪದಕಗಳು ಮಾತ್ರವಲ್ಲದೆ ವಿಶ್ವ ಚಾಂಪಿಯನ್ ಷಿಪ್ ನಲ್ಲಿ ಚಿನ್ನ, ಎರಡು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಸಿಂಧು ಗೆದ್ದುಕೊಂಡಿದ್ದಾರೆ.

No Comments

Leave A Comment