Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಕುಂದಾಪುರ: ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿದ ಬಸ್ – ಪ್ರಯಾಣಿಕರು ಅಪಾಯದಿಂದ ಪಾರು

ಕುಂದಾಪುರ:ಜು 16.ನಿಯಂತ್ರಣ ತಪ್ಪಿದ ಬಸ್ ಒಂದು ಡಿವೈಡರ್ ಮೇಲೆರಿ ನಿಂತ ಘಟನೆ ಕುಂದಾಪುರ ತಾಲ್ಲೂಕಿನ ಕುಂಭಾಸಿ ಬಳಿಯ ಕೊರವಡಿ ಕ್ರಾಸ್ ಎಂಬಲ್ಲಿ ನಡೆದಿದೆ.

ಮಂಗಳೂರಿನಿಂದ ಮುಂಬೈ ಕಡೆಗೆ ಸಾಗುತಿದ್ದ ಖಾಸಗಿ ಸ್ಲೀಪರ್ ಬಸ್ ರಾಷ್ಟ್ರೀಯ ಹೆದ್ದಾರಿ ಯಲ್ಲಿನ ಆಳವಾದ ಹೊಂಡಕ್ಕೆ ಇಳಿದು ಡಿವೈಡರ್ ಎರಿ ನಿಂತಿದೆ.

ಉಡುಪಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯು ಸಂಪೂರ್ಣವಾಗಿ ಹೊಂಡಮಯವಾಗಿದ್ದು ಇದೇ ರೀತಿಯ ಹೊಂಡಕ್ಕೆ ಬಸ್ ಬಿದ್ದಿದೆ. ತಕ್ಷಣವೇ ವಾಹನವನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಚಾಲಕ ಬಸ್ ಅನ್ನು ಡಿವೈಡರ್ ಮೇಲೇ ಏರಿಸಿ ಹೆಚ್ಚಿನ ಅಪಾಯವನ್ನು ತಪ್ಪಿಸಿ ದ್ದಾರೆ. ಬಸ್ ನಲ್ಲಿ ಸುಮಾರು 40ರಷ್ಟು ಪ್ರಯಾಣಿಕರಿದ್ದು ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ‌. ಚಾಲಕನ ಸಮಯೋಚಿತ ನಿರ್ಧಾರದಿಂದಾಗಿ ಹೆಚ್ಚಿನ ಅಪಾಯ ತಪ್ಪಿದ್ದು, ಬಸ್ ರಸ್ತೆಯಲ್ಲಿಯೇ ಚಲಿಸಿದ್ದಲ್ಲಿ ಪಲ್ಟಿಯಾಗಿ ಬೀಳುವ ಸಾಧ್ಯತೆ ಕೂಡಾ ಇದ್ದಿತ್ತು ಎನ್ನಲಾಗಿದೆ.

ಬಸ್ ಸುಮಾರು 300 ಮೀಟರ್ ನಷ್ಟು ದೂರ ಡಿವೈಡರ್ ಮೇಲೆಯೇ ಚಲಿಸಿತ್ತು. ಹೆದ್ದಾರಿ ಮೇಲೆ ಇದ್ದ ಹೊಂಡದಲ್ಲಿ ಮಳೆ ನೀರು ಸಂಗ್ರಹವಾಗಿ ಹೊಂಡ ಸ್ವಷ್ಟವಾಗಿ ಗೋಚರಿಸಿದ ಕಾರಣ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಘಟನೆಯಲ್ಲಿ ಬಸ್ಸಿಗೆ ಅಲ್ಪ ಪ್ರಮಾಣದ ಹಾನಿ ಆಗಿದೆ.

No Comments

Leave A Comment