Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಸಿನಾಲೋವಾದಲ್ಲಿ ಮಿಲಿಟರಿ ಹೆಲಿಕಾಪ್ಟರ್ ಪತನ-14 ಸಾವು

ಸಿನಾಲೋವಾ:ಜು 16. ಮೆಕ್ಸಿಕೋದ ಸಿನಾಲೋವಾದಲ್ಲಿ ಬ್ಲ್ಯಾಕ್ ಹಾಕ್ ಮಿಲಿಟರಿ ಹೆಲಿಕಾಪ್ಟರ್ ಪತನಗೊಂಡು 14 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಒಬ್ಬರು ಗಾಯಗೊಂಡಿದ್ದಾರೆ.

ಹೆಲಿಕಾಪ್ಟರ್ ಪತನಕ್ಕೆ ಕಾರಣ ತಿಳಿದು ಬಂದಿಲ್ಲ. ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ನಡುವೆ ಶುಕ್ರವಾರ ಸಿನಾಲೋವಾದ ಇನ್ನೊಂದೆಡೆ ಡ್ರಗ್ ಲಾರ್ಡ್ ರಾಫೆಲ್ ಕ್ಯಾರೊ ಕ್ವಿಂಟೆರೋ ಎಂಬಾತನನ್ನು ಬಂಧಿಸಲಾಗಿದ್ದು, ಆತನ ಬಂಧನಕ್ಕೂ, ಹೆಲಿಕಾಪ್ಟರ್‍ ಪತನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನೌಕಾಪಡೆ ಸ್ಪಷ್ಟಪಡಿಸಿದೆ.

1985 ರಲ್ಲಿ ಆಂಟಿ-ನಾರ್ಕೋಟಿಕ್ ಏಜೆಂಟ್‌ನ ಕೊಲೆ ಪ್ರಕರಣದಲ್ಲಿ ರಾಫೆಲ್ ಶಿಕ್ಷೆಗೊಳಗಾಗಿದ್ದ. ಈತ 1980 ರ ದಶಕದಲ್ಲಿ ಲ್ಯಾಟಿನ್ ಅಮೆರಿಕದ ಬಲಾಢ್ಯ ಮಾದಕವಸ್ತು ಕಳ್ಳಸಾಗಣೆ ಸಂಸ್ಥೆಗಳಲ್ಲಿ ಒಂದಾದ ಗ್ವಾಡಲಜರಾ ಕಾರ್ಟೆಲ್‌ನ ಸಹ-ಸಂಸ್ಥಾಪಕನಾಗಿದ್ದ. ಅಮೆರಿಕಾದಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿಯೂ ಈತ ಕುಖ್ಯಾತಿಯಾಗಿದ್ದ ಎನ್ನಲಾಗಿದೆ.

No Comments

Leave A Comment