Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಉಡುಪಿ ತಾಲೂಕು ಪಂಚಾಯತ್ ನೂತನ ಕಾರ್ಯನಿರ್ವಹಣಾಧಿಕಾರಿಯಾಗಿ ಹೆಬ್ರಿ ನಿವಾಸಿ ವಿಜಯ ನಾಯ್ಕ ಅಧಿಕಾರ ಸ್ವೀಕಾರ

ಹೆಬ್ರಿ: ಉಡುಪಿ  ತಾಲೂಕು ಪಂಚಾಯತ್  ನೂತನ ಕಾರ್ಯನಿರ್ವಹಣಾಧಿಕಾರಿಯಾಗಿ ಹೆಬ್ರಿ ನಿವಾಸಿ ಹೆಬ್ರಿ ಗ್ರಾಮಪಂಚಾಯತ್ ನಲ್ಲಿ ಪಿಡಿಓ ಆಗಿ ಕತ೯ವ್ಯ ನಿವ೯ಹಿಸಿ ಜನಮೆಚ್ಚುಗೆ ಗೆ ಪಾತ್ರರಾಗಿದ್ದ ವಿಜಯ ನಾಯ್ಕ್ ಜುಲೈ 14ರಂದು ಅಧಿಕಾರ ಸ್ವೀಕರಿದರು.

 ಮೂಲತಃ ಹೆಬ್ರಿ ತಾಲೂಕಿನ ನಾಡ್ಪಾಲು‌ ಗ್ರಾಮದ ಸೋಮೇಶ್ವರದ ವಿಜಯಾ ನಾಯ್ಕ್ ಅವರು ವರಂಗ,ಮರ್ಣೆ ಕಡ್ತಲ ಗ್ರಾಮ ಪಂಚಾಯಿತಿ ಸೇರಿ ವಿವಿಧ ಪಂಚಾಯಿತಿಗಳಲ್ಲಿ ಪಿಡಿಓ ಆಗಿ ಸೇವೆ ಸಲ್ಲಿಸಿದ ಬಳಿಕ ಸಹಾಯಕ ನಿರ್ದೇಶಕರಾಗಿ ಪದೋನ್ನತಿ ಹೊಂದಿದ್ದರು.ಇದೀಗ  ಉಡುಪಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯಾಗಿ ಮುಂಭಡ್ತಿ ಪಡೆದು ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.

No Comments

Leave A Comment