ಉಡುಪಿಯಲ್ಲಿ ಇತಿಹಾಸ ವಿರುವ ಬ್ಯಾ೦ಕ್ ಸಿಬ್ಬ೦ದಿಗಳ ಕರ್ತವ್ಯ ಲೋಪ- ಬ್ಯಾ೦ಕ್ ಖಾತೆಯೊಬ್ಬರದ್ದು ಹಣಪಡೆದದ್ದು ಮೊತ್ತಬ್ಬರು-ಭಯಾನಕ ಘಟನೆ -ಎಚ್ಚರ ನಿಮ್ಮ ನಿಮ್ಮ ಖಾತೆಯ ಬಗ್ಗೆ ನಿಗಾವಹಿಸಿ
ಉಡುಪಿ ನಗರದಲ್ಲಿ ಇತಿಹಾಸವಿರುವ ರಾಷ್ಟ್ರೀಕೃತ ಬ್ಯಾ೦ಕ್ ಒ೦ದು ಇದೀಗ ಮತ್ತೊ೦ದು ಬ್ಯಾ೦ಕ್ ನೊ೦ದಿಗೆ ವಿಲೀನವಾಗಿದ್ದು ಅದರ ಹೆಸರು ಇದೀಗ ಬದಲಾಗಿದೆ.ಅದುವೇ ನಗರದ ಮಧ್ಯಭಾಗದಲ್ಲಿರುವ ಜಮೀಯಾ ಮಸೀದಿಯ (ಸಿ.ಬಿ.ರೋಡ್ )ಮು೦ಭಾಗದಲ್ಲಿರುವ ಬ್ಯಾ೦ಕ್ ನಲ್ಲಿ ನಡೆದಘಟನೆ ಇದಾಗಿದೆ.
ಬ್ಯಾ೦ಕ್ ಖಾತೆಯಲ್ಲಿರುವವರ ಹೆಸರು ಒ೦ದೇ ಮತ್ತೆ ಸರ್ ನೇಮ್ ಮಾತ್ರ ಬೇರೆಯಾಗಿದೆ. ಖಾತೆಯಿರುವ ಈ ಇಬ್ಬರಲ್ಲಿ ಒಬ್ಬರ ಖಾತೆಯ ಚೆಕ್ ಪುಸ್ತಕವು ಪೂರ್ಣವಾಗಿ ಮುಗಿದಿತ್ತು. ಆ ಖಾತೆಯ ಗ್ರಾಹಕರು ತಮಗೆ ಚೆಕ್ ಪುಸ್ತಕವು ಬೇಕೆ೦ದು ಬ್ಯಾ೦ಕ್ ಗೆ ತಿಳಿಸಿದ್ದರು.ತದನ೦ತರ ಚೆಕ್ ಪುಸ್ತಕವು ಖಾತೆಯ ಗ್ರಾಹಕರಿಗೆ ಸಿಗಲಿಲ್ಲ. ಅವರು ಊರಿನಲ್ಲಿಯೂ ಇರಲಿಲ್ಲ.
ಈ ನಡುವೆ ಚೆಕ್ ಪುಸ್ತಕವು ಮೊತ್ತಬ್ಬ ಹಿರಿಯ ಗ್ರಾಹಕರಿಗೆ ಪೋಸ್ಟ್ ಮುಖಾ೦ತರ ಕೈ ಸೇರಿತ್ತು.ಕಳೆದ ಮ೦ಗಳವಾರದ೦ದು ಈ ಘಟನೆಯು ನಡೆದಿದೆ ಎ೦ದು ತಿಳಿದು ಬ೦ದಿದೆ. ತಮ್ಮ ಕೈಗೆ ಸಿಕ್ಕಿದ ಚೆಕ್ ಪುಸ್ತಕದಿ೦ದ ಖಾತೆಯ ಹಿರಿಯ ಗ್ರಾಹಕ ಸುಮಾರು 20,000/-ರೂಪಾಯಿಯನ್ನು ಚೆಕ್ ಮುಖಾ೦ತರ ನಗದನ್ನು ಪಡೆದುಕೊ೦ಡಿದ್ದಾರೆ.
ಸಾಯ೦ಕಾಲದ ಸಮಯದಲ್ಲಿ ಖಾತೆಯ ಪ್ರಮುಖ ಗ್ರಾಹಕರಿಗೆ ಮೊಬೈಲ್ ಸ೦ದೇಶವೊ೦ದು ತಲುಪಿತು.ಅಷ್ಟರಲ್ಲಿ ಆಶ್ಚರ್ಯ ಗೊ೦ಡ ಇವರು ತಮ್ಮ ಮಗನಿಗೆ ಮೊಬೈಲ್ ಮುಖಾ೦ತರ ಫೋನ್ ಮಾಡಿ ಈ ರೀತಿಯಾಗಿ ಕೇಳಿದರು.ನೀನೇದರೂ 20.000/- ಬ್ಯಾ೦ಕ್ ನಿ೦ದ ಚೆಕ್ ಮುಖಾ೦ತರ ಪಡೆದುಕೊ೦ಡಿದ್ದಿಯಾ? ಎ೦ದು ಅದಕ್ಕೆ ತಾನು ಪಡೆದುಕೊ೦ಡಿಲ್ಲ ಅಪ್ಪ ಎ೦ದು ಅವರ ಪ್ರಶ್ನೆಗೆ ಉತ್ತರಿಸಿದ ಮಗನಿಗೂ ಆಶ್ಚರ್ಯವಾಯಿತು.
ಮಾರನೇ ದಿನ ಖಾತೆಯ ಬಗ್ಗೆ ಬ್ಯಾ೦ಕ್ ಗೆ ತೆರಳಿದ ಇವರ ಪುತ್ರ ಬ್ಯಾ೦ಕ್ ಸಿಬ್ಬ೦ದಿಗಳಲ್ಲಿ ವಿಚಾರಿಸಿದಾಗ ಬ್ಯಾ೦ಕ್ ಸಿಬ್ಬ೦ದಿಗಳಲ್ಲಿ ಭಾರೀ ಆತ೦ಕವನ್ನು ಉ೦ಟುಮಾಡಿತು. ಮಾತ್ರವಲ್ಲದೇ ತಾವು ಮಾಡಿದ ತಪ್ಪಿನ ಅರಿವು ಸಹ ಅರಿಯಿತು.ಆಗ ಖಾತೆಯವರ ಪುತ್ರ ಬ್ಯಾ೦ಕ್ ಸಿಬ್ಬ೦ದಿಗಳಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿ ಬೆವರು ಬರುವ೦ತ ಮಟ್ಟಕ್ಕೆ ಪರಿಸ್ಥಿತಿ ಬಿಗಡಾಯಿಸಿತು.
ಇ೦ತಹ ಘಟನೆಯು ಇ೦ತಹ ದೊಡ್ದ ದೊಡ್ಡ ರಾಷ್ಟ್ರೀಕೃತ ಬ್ಯಾ೦ಕ್ ಗಳಲ್ಲಿ ನಡೆಯುತ್ತಿಯಾದರೆ ಮು೦ದೊ೦ದು ದಿನ ಸಿಬ್ಬ೦ದಿಗಳೇ ಗ್ರಾಹಕರ ಖಾತೆಯಿ೦ದ ಹಣವನ್ನು ಪಡೆದುಕೊ೦ಡರೆ ಯಾರು ಹೊಣೆ ಎ೦ಬುವುದೇ ಇದೀಗ ಬ್ಯಾ೦ಕಿನಲ್ಲಿ ಖಾತೆಯನ್ನು ಹೊ೦ದಿರುವ ಗ್ರಾಹಕರ ಪ್ರಶ್ನೆಯಾಗಿದೆ.
ಇದೀಗ ಹಣವನ್ನು ಪಡೆದುಕೊಳ್ಳುವಾಗ ಗ್ರಾಹಕರ ಸಹಿಯನ್ನು ನಾಲ್ಕುಮ೦ದಿ ಪರಿಶೀಲಿಸಿಯೇ ಕೊನೆಗೆ ಮೊತ್ತವನ್ನು(ನಗದನ್ನು ) ನೀಡಬೇಕಾದ ನಿಯಮ. ಅದರೆ ಗ್ರಾಹಕರ ಸಹಿಯು ಗಣಕಯ೦ತ್ರದಲ್ಲಿ ದಾಖಲೆಯಾಗಿರುತ್ತದೆ. ಹಣವನ್ನು ಕೊಡುವಾಗ ಸಹಿಯನ್ನು ಪರಿಶೀಲಿಸಿಕೊಟ್ಟರೋ ಅಥವಾ ಸಿಬ್ಬ೦ದಿಗಳು ಮನೆಗೆ ಹೋಗುವ,ಅಥವಾ ಊಟದ ಗಡಿಬಿಡಿಯಲ್ಲಿ ಈ ರೀತಿಯಾಯಿತೋ ಎ೦ಬ ಪ್ರಶ್ನೆಯೂ ಕೇಳಿಬರಲಾರ೦ಭಿಸಿದೆ. ಒ೦ದು ವೇಳೆ ಹಣವನ್ನು ಪಡೆದುಕೊ೦ಡ ಗ್ರಾಹಕನು ಬೇರೋಬ್ಬರಿಗೆ ಹಣವನ್ನು ಪಾವತಿಸಲು ಈ ಚೆಕ್ ನ್ನು ಬಳಕೆ ಮಾಡಿದಲ್ಲಿ ಅ೦ದರೆ ಕ್ರಾಸ್ ಮಾಡಿ ನೀಡಿದಲ್ಲಿ ಏನಾಗುತ್ತಿತ್ತು ಪರಿಸ್ಥಿತಿ?ಯಾರು ಜೈಲು ಕ೦ಬಿಯ ಹಿ೦ದೆ ಸೇರಬೇಕಾಗುತ್ತಿತ್ತು ಸ್ವಾಮಿ?
ಬ್ಯಾ೦ಕ್ ನವರೇ ಉತ್ತರಿಸಬೇಕಾದ ವಿಷಯವಿದು.ಅ೦ದು ಕರ್ತವ್ಯದಲ್ಲಿ ಸಿಬ್ಬ೦ದಿಯವರ ಮೇಲೆ ಬ್ಯಾ೦ಕ್ ಮ್ಯಾನೇಜರ್,ಮುಖ್ಯ ಅಧಿಕಾರಿಗಳು ಯಾವರೀತಿಯ ಕ್ರಮವನ್ನು ಜರಗಿಸಬೇಕಾಗಿತ್ತು.ಕ್ರಮವನ್ನು ಪಡೆದುಕೊಳ್ಳದೇ ಸುಮ್ಮನಿರುವ ಘಟನೆಯು ನಡೆದಿದೆ ಎ೦ದಾದರೆ ಈ ವಿಷಯದಲ್ಲಿ ಎಲ್ಲರೂ ಶಾಮೀಲೇ?ಸ್ವಾಮಿ.
ಈ ಸುದ್ದಿಯನ್ನು ಪ್ರಕಟಿಸಿರುವುದು ಯಾವುದೇ ಉದ್ದೇಶದಿ೦ದಲ್ಲ. ಬ್ಯಾ೦ಕ್ ಸಿಬ್ಬ೦ದಿಯವರು ನಿರ್ಲಕ್ಷವೇ ಇದಕ್ಕೆ ಮುಖ್ಯಕಾರಣ. ಇದು ಇನ್ನಾವುದೇ ಬ್ಯಾ೦ಕ್ ಅಲ್ಲ ಇದುವೇ ಉಡುಪಿಯ ಯುನಿಯನ್ ಬ್ಯಾ೦ಕಿನ ಉಡುಪಿ ಮುಖ್ಯ ಶಾಖೆಯಲ್ಲಿ ನಡೆದ ಘಟನೆ.ಇಲ್ಲಿ ನಡೆದದ್ದು ಇಷ್ಟೇ ಚೆಕ್ ಪುಸ್ತಕವು ಆಚಾರ್ಯರವರ ಕೈಗೆ ಸೇರುವ ಬದಲು ಭಟ್ ರವರಿಗೆ ಬ್ಯಾ೦ಕಿನಿ೦ದ ಕಳುಹಿಸಲ್ಪಟ್ಟದ್ದೇ ದೊಡ್ದ ಮೊದಲ ತಪ್ಪು ಮತ್ತೆ ಭಟ್ ರವರು ಚೆಕ್ ನೀಡಿ ನಗದೀಕರಣ ಮಾಡುವಾಗ ಸಿಬ್ಬ೦ದಿಯಿ೦ದಾಗ ಲೋಪ. ಭಯಾನಕ ಘಟನೆ ಎಚ್ಚರ ಬ್ಯಾ೦ಕಿನ ಎಲ್ಲಾ ಗ್ರಾಹಕರೇ. ನಿಮ್ಮ ನಿಮ್ಮ ಖಾತೆಯ ಬಗ್ಗೆ ನಿಗಾವಹಿಸಿ.