Log In
BREAKING NEWS >
ಫೆ.14 ಮತ್ತು 15ರ೦ದು ಉಡುಪಿಯ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ಧ್ವಜಸ್ತ೦ಭದ ಸ್ಥಾಪನಾ ಕಾರ್ಯಕ್ರಮವು ನಡೆಯಲಿದೆ.....

ಓಮನ್‌ನ ಬೀಚ್‌ನಲ್ಲಿ ಭಾರತೀಯ ಮೂಲದ ಮೂವರು ಸಮುದ್ರ ಪಾಲು

ಓಮನ್:ಜು 14. ಒಮಾನ್ ಕರಾವಳಿ ತೀರದಲ್ಲಿ ಭಾರತೀಯ ಮೂಲದ ಒಂದೇ ಕುಟುಂಬದ ಮೂವರು ಸಮುದ್ರ ಪಾಲಾಗಿರುವ ಘಟನೆ ನಡೆದಿದೆ.

ಅಲೆಗಳಿಗೆ ಕೊಚ್ಚಿಹೋಗಿದ್ದ ತಂದೆ-ಮಗನ ಮೃತದೇಹ ಪತ್ತೆಯಾಗಿದ್ದು, ಬಾಲಕಿ ಕಣ್ಮರೆಯಾಗಿದ್ದು, ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಶಶಿಕಾಂತ್ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ದುಬೈನಲ್ಲಿ ಸುಮಾರು 20 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಬಕ್ರೀದ್ ಹಬ್ಬದ ರಜೆಯಿಂದಾಗಿ ಪತ್ನಿ ಸಾರಿಕಾ ಹಾಗೂ ಮೂವರು ಮಕ್ಕಳೊಂದಿಗೆ ಓಮನ್ ಸಮುದ್ರ ತೀರಕ್ಕೆ ತೆರಳಿದ್ದರು.

ಅಲೆಗಳಲ್ಲಿ ಶ್ರುತಿ ಮತ್ತು ಶ್ರೇಯಸ್ ಕೊಚ್ಚಿ ಹೋಗಿದ್ದು, ತನ್ನ ಕಣ್ಣೆದುರೇ ಮಗಳು ಮತ್ತು ಮಗ ನೀರಿನಲ್ಲಿ ಮುಳುಗುತ್ತಿರುವುದನ್ನು ನೋಡಿದ ತಂದೆ ಅವರನ್ನು ರಕ್ಷಿಸಲು ಹೋಗಿದ್ದಾರೆ. ಆದರೆ ಅಲೆಗಳ ರಭಸಕ್ಕೆ ಶಶಿಕಾಂತ್‌ ಕೂಡ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ದಡದಲ್ಲಿದ್ದ ಪತ್ನಿ ಮತ್ತು ಇನ್ನೊಬ್ಬ ಮಗಳು ಮಾತ್ರ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.

No Comments

Leave A Comment