Log In
BREAKING NEWS >
```````ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಓದುಗರಿಗೆಮತ್ತು ಅಭಿಮಾನಿಗಳಿಗೆ ಶ್ರೀಗೌರಿ-ಗಣೇಶ ಹಬ್ಬದ ಶುಭಾಶಯಗಳು````````

ಕಾಣಿಯೂರು: ಕಾರು ಬೈತಡ್ಕ ಹೊಳೆಗೆ ಬಿದ್ದ ಪ್ರಕರಣ – ಇಬ್ಬರ ಮೃತದೇಹ ಪತ್ತೆ

ಕಾಣಿಯೂರು:ಜು 12. ಕಾಣಿಯೂರು ಸಮೀಪದ ಕಾಣಿಯೂರು ಬೈತ್ತಡ್ಕ ಹೊಳೆಗೆ ಕಾರು ಬಿದ್ದ ಪ್ರಕರಣಕ್ಕೆ ಸಂಬಂಧಿಸಿ ಬೈತ್ತಡ್ಕದಿಂದ 200 ಮೀಟರ್ ದೂರ ಮರಕ್ಕಡ ಹೊಳೆಯಲ್ಲಿ ಇಬ್ಬರ ಮೃತ ದೇಹ ಮಂಗಳವಾರ ಮುಂಜಾನೆ ಪತ್ತೆಯಾಗಿದೆ. ಮೃತದೇಹವನ್ನು ಇನ್ನೂಗುರುತಿಸಲಾಗಿಲ್ಲ.

ಓರ್ವನ ಮೃತ ದೇಹವು ಹೊಳೆಯ ಬದಿಯಲ್ಲಿದ್ದ ಮರದ ದಿಮ್ಮಿಯಲ್ಲಿ ಪತ್ತೆಯಾಗಿದ್ದು, ಹೊಳೆಯಲ್ಲಿ ನೀರು ಕಡಿಮೆಯಾದ ಹಿನ್ನಲೆಯಲ್ಲಿ ಬೆಳಕಿಗೆ ಬಂದಿದೆ. ಮತ್ತೊಬ್ಬನ ಮೃತದೇಹವು 50 ಮೀಟರ್ ದೂರದ ಅಂತರದಲ್ಲಿ ಪತ್ತೆಯಾಗಿದೆ.

ಕಡಬ ತಾಲೂಕಿನ ಕಾಣಿಯೂರು ಸಮೀಪದ ಬೈತಡ್ಕ ಗೌರಿ ಹೊಳೆಗೆ ಕಾರೊಂದು ಬಿದ್ದು ಯುವಕರಿಬ್ಬರು ನಾಪತ್ತೆಯಾದ ಘಟನೆ ಜು. 9ರಂದು ತಡರಾತ್ರಿ ನಡೆದಿತ್ತು. ಬಂಟ್ವಾಳ ತಾಲೂಕಿನ ವಿಟ್ಲ ಮುಟ್ನೂರು ಗ್ರಾಮದ ಕುಂಡಡ್ಕ-ಸಾಂತ್ಯಡ್ಕ ನಿವಾಸಿ ಚೋಮ ನಾಯ್ಕ ಅವರ ಪುತ್ರ ಧನುಷ್‌ (25) ಹಾಗೂ ವಿಟ್ಲ ಕನ್ಯಾನ ನಿವಾಸಿ ಧನುಷ್‌ (21) ಕಾರಿನಲ್ಲಿದ್ದರು ಎನ್ನಲಾಗಿದ್ದು, ಅವರು ನಾಪತ್ತೆಯಾಗಿದ್ದರು.

No Comments

Leave A Comment