
ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಕಳಪೆ ಕಾಮಗಾರಿ ಮೂಲಕ ವರದಾನವಾದ ಚಿನ್ನದ ಮೊಟ್ಟೆ ಇಡುವ ರಾಷ್ಟ್ರೀಯ ಹೆದ್ದಾರಿ 75
ನೆಲ್ಯಾಡಿ : ಪ್ರಮುಖ ನಗರಗಳಾದ ಮಂಗಳೂರು-ಬೆಂಗಳೂರು ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದು. ಆದರೆ ಇದೀಗ ಈ ರಸ್ತೆಯಿಂದಾಗಿ ಕೆಲವು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜೇಬು ತುಂಬಿಸುದಲ್ಲದೇ, ಕಳೆದ ಕೆಲವು ವರ್ಷಗಳಿಂದ ಸಾರ್ವಜನಿಕರು ಈ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳ ಸರ್ವನಾಶಕ್ಕಾಗಿ ಹರಕೆಯ ಮೇಲೆ ಹರಕೆ ಹಾಗೂ ಹಿಡಿ ಶಾಪ ಹಾಕುತ್ತಲೇ ಇದ್ದಾರೆ.
ಕಳೆದ 2 ವರ್ಷದ ಹಿಂದೆ ಪ್ರಸಿದ್ಧ ಎಲ್ & ಟಿ ಕಂಪನಿಗೆ NHAL ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸ್ಪಂದಿಸದೇ, ಭ್ರಷ್ಟ ಅಧಿಕಾರಿಗಳ ಜನಪ್ರತಿನಿಧಿಗಳ ಕಮಿಷನ್ ವ್ಯಾಮೋಹದ ಆಸೆಯಿಂದಾಗಿ ಬೇಸತ್ತು ಈ ಕಂಪನಿ ಮೂಲಕ ರಸ್ತೆಯ ಬದಿಯಲ್ಲಿ ಯಮರೂಪ ಸ್ವರೂಪಿ ದೊಡ್ಡ ದೊಡ್ಡ ಕಂದಕಗಳನ್ನು ನಿರ್ಮಾಣ ಮಾಡಿಸಿ, ಕೊನೆಗೂ ಈ ಭ್ರಷ್ಟ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಕಮಿಷನ್ ವ್ಯಾಮೋಹದಿಂದಾಗಿ ಕಾಮಗಾರಿ ಪೂರ್ಣ ಮಾಡದೇ ಎಲ್ & ಟಿ ಕಂಪನಿಯವರು ಇಲ್ಲಿಯ ಲೂಟಿ ಕೋರರನ್ನು ಬಿಟ್ಟು ಬದುಕಿದರೆ ಬಚಾವ್ ಎಂದು ಓಡಿಹೋಗಿರುತ್ತಾರೆ.
ನಂತರದಲ್ಲಿ ರಸ್ತೆಯ 2ನೇ ಪದರ ಡಾಂಬರೀಕರಣ ಪ್ರಹಾಸನ ಆರಂಭವಾಯಿತು ಇದಕ್ಕೆ ಸುಮಾರು 18 ಕೋಟಿ ಟೆಂಡರ್ ಕರೆದು ರಸ್ತೆ ಗುಂಡಿಗಳನ್ನು ಮುಚ್ಚಿ ಜನರ ಕಣ್ಣಿಗೆ ಮಣ್ಣು ಹಾಕಲಾಯಿತು. ಇಲ್ಲಿ ಮತ್ತೆ ಈ ಭ್ರಷ್ಟರು 18 ಕೋಟಿ ನುಂಗಿ ನೀರು ಕುಡಿದರು. ಮಾತ್ರವಲ್ಲದೇ ಅದೇ ರೀತಿಯಲ್ಲಿ ಶಿರಾಡಿ ಘಾಟಿಯಲ್ಲಿ ಸಿಮೆಂಟ್ ರಸ್ತೆ ನಿರ್ಮಾಣ ಮಾಡಲು ಸುಮಾರು 102 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು.ವಿಶೇಷ ಎಂದರೆ ಈ ಕಾಮಗಾರಿ ಮುಗಿದು 15ನೇ ದಿನಕ್ಕೆ ರಸ್ತೆಯ ತಡೆಗೋಡೆ ಕುಸಿದು ಬಿದ್ದು ಕೆಲವು ತಿಂಗಳು ಈ ರಸ್ತೆಯನ್ನು ಬಂದ್ ಮಾಡಿ ಜನರಿಗೆ ತೊಂದರೆ ಮೇಲೆ ತೊಂದರೆ ಕೊಟ್ಟಿರುತ್ತಾರೆ. ಈಗ ಮತ್ತೆ ಅದರ ತಡೆಗೋಡೆ ನಿರ್ಮಿಸಲು ಯಾವುದೇ ನಕ್ಷೆಗಳಿಗೆ ಅನುಮೋದನೆ ನೀಡದೆ ಮತ್ತೆ 32 ಕೋಟಿ ನುಂಗುವ ಹುನ್ನಾರ ಮಾಡಲಾಗುತ್ತಿದೆ.
ಇನ್ನೊಂದು ಕಡೆ ಈಗ ಗುಂಡ್ಯದಿಂದ ಬಿ.ಸಿ ರೋಡ್ ತನಕ 2 ಕಂಪೆನಿಗಳು ಕರೆದಿರುವ 1500 ಕೋಟಿ ರೂ. ಗಳ ವೆಚ್ಚದಲ್ಲಿ ನಿರ್ಮಾಣ ಮಾಡುವ ಚತುಷ್ಪಥ ರಸ್ತೆಯ ತಡೆಗೋಡೆ ಕುಸಿದು ಬೀಳಲು ಆರಂಭಿಸಿದ್ದು, ರಸ್ತೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಇಷ್ಟು ಮಾತ್ರವಲ್ಲದೆ ಈ ರಸ್ತೆಯುದ್ಧಕ್ಕೂ ಮರಣಗುಂಡಿಗಳು ನಿರ್ಮಾಣ ಆಗಿದ್ದು, ಜನರ ಪ್ರಾಣಕ್ಕೆ ಸಂಚಕಾರ ತಂದಿದೆ.
ವಿವಿಧ ಕುಂಟು ನೆಪ ಹೇಳಿ ಸಾರ್ವಜನಿಕರ ಕೋಟಿಗಟ್ಟಲೆ ಹಣ ನುಂಗುತ್ತಾ ಇದರ ಸವಿ ರುಚಿ ಸವಿಯುತ್ತಿರುವವರು ಈ ರಸ್ತೆ ನಿರ್ಮಾಣದ ಹಿಂದೆ ಇರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು. ಇವರಿಗೆ ಈ ರಾಷ್ಟ್ರೀಯ ಹೆದ್ದಾರಿ 75 ಚಿನ್ನದ ಮೊಟ್ಟೆ ಇಡುವ ಕೋಳಿಯತಾಗಿದೆ ಎನ್ನುವ ಆರೋಪ ಕೇಳಿಬಂದಿದೆ.