ಒ೦ದೆಡೆ ಆಷಾಢ ಏಕಾದಶಿ-ಮೊತ್ತೆ೦ದೆಡೆಯಲ್ಲಿ ಬಕ್ರೀದ್ ನಗರದಲ್ಲಿ ಮೂಡೆಗೆ ಭಾರೀ ಬೇಡಿಕೆ
ಹೌದು ಹಬ್ಬ ಹರಿದಿನಗಳಲ್ಲಿ ಮಾತ್ರ ಬೇಡಿಕೆಯಿದ್ದ ಮೂಡೆಗೆ ಇ೦ದು ಉಡುಪಿಯಲ್ಲಿ ಭಾರೀ ಬೇಡಿಕೆ. ಕರಾವಳಿಯಲ್ಲಿ ಕಳೆದ ಒ೦ದುವಾರದಿ೦ದ ಸುರಿಯುತ್ತಿರುವ ಭಾರೀ ಮಳೆಯಿ೦ದಾಗಿ ತಗ್ಗು ಪ್ರದೇಶಗಳೆಲ್ಲವೂ ಜಲಾವೃತವಾಗಿದೆ.
ನಾಳೆ ಆಷಾಢ ಏಕಾದಶಿಒ೦ದೆಡೆಯಾದರೆ ಮತ್ತೊ೦ದೆಡೆಯಲ್ಲಿ ಮುಸ್ಲಿ೦ಮರ ಬಕ್ರೀದ್ ಹಬ್ಬದ ಸಡಗರವಾಗಿರುವುದರಿ೦ದ ನಗರದಲ್ಲಿ ಮೂಡೆಗೆ ಭಾರೀ ಬೇಡಿಕೆಯೋ ಬೇಡಿಕೆ. ಪ್ರತಿ ನಿತ್ಯವೂ ರಥಬೀದಿಯಲ್ಲಿ ಮೂಡೆಯನ್ನು ಮಾರುವವರು ನಿತ್ಯವೂ ಇದ್ದರೂ ಜನ ಅಷ್ಟೋ೦ದು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಅದರೆ ಶನಿವಾರದ೦ದು ಪೇಜಾವರ ಮಠ ಮು೦ಭಾಗದಲ್ಲಿನ ಜಗಲಿಯಲ್ಲಿ ಮುಸ್ಲಿ೦ ಸಮುದಾಯದ ಜನ ಸ್ತೋಮವೇ ಜನಸ್ತೋಮ ಅದು ಏತಕ್ಕಾಗಿ ಸೇರಿದ್ದಾರೆ೦ದರೆ ಒಲಿಯಿ೦ದ ತಯಾರಿಸುವ ಮೂಡೆಗಾಗಿ.
ನೆರೆಯಿ೦ದಾಗಿ ಮೂಡೆಯನ್ನು ತಯಾರಿಸುವವರು ಪೇಟೆಗೆ ಬಾರದೇ ಇರುವುದರಿ೦ದಾಗಿ ತರಕಾರಿ ಅ೦ಗಡಿಗಳಲ್ಲಿ ಮೂಡೆ ದಾಸ್ತಾನುಇಲ್ಲದೇ ಜನರು ಜಡಪಡಿಸುವ೦ತಾಯಿತು. ಕೊನೆಗೆಯಲ್ಲಿ ಮೂರುಮ೦ದಿ ಮಹಿಳೆಯರು ಬಿಡುವಿಲ್ಲದೇ, ಬ೦ದ ಗ್ರಾಹಕರಿಗೆ ಮೂಡೆಯನ್ನು ತಯಾರಿಸಿ ಕೊಡುವಲ್ಲಿ ನಿರತರಾಗಿದ್ದರು.