Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಅಕ್ರಮ ಅಕೇಶಿಯಾ ಮರ ಸಾಗಾಟ : ಓರ್ವನ ಬಂಧನ

ಉಪ್ಪಿನಂಗಡಿ: ಕಣಿಯೂರು ಗ್ರಾಮದ ಸಾರ್ವಜನಿಕರ ಸಹಾಯದಿಂದ ಕಣಿಯೂರು ಗ್ರಾಮದ ಗಾಳಿಗುಡ್ಡೆ ಎಂಬಲ್ಲಿ ಪದ್ಮಂಜ ಪಿಲಿಗೂಡು ರಸ್ತೆಯಲ್ಲಿ ಅಕ್ರಮವಾಗಿ ಅಕೇಶಿಯಾ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ವಾಹನವನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಲಾಯಿತು.

 ಈ ಪ್ರಕರಣದಲ್ಲಿ ಮೂವರು ಆರೋಪಿಗಳಿದ್ದು, ಲಾರಿ ಚಾಲಕ ಅಶ್ರಫ್ ಬಿನ್ ಅಬ್ಬೋನ್ ಬೊಗೋಳಿ ಮನೆ, ಪಾಣೆ ಮಂಗಳೂರು ಇವರನ್ನು ಬಂಧಿಸಿದ್ದಾರೆ.

ಇನ್ನು ಉಳಿದ ಆರೋಪಿಗಳಾದ ಮಹಮ್ಮದ್ ಅಶ್ಪಕ್ ಬಿನ್ ಜಾಕೀರ್ ಹುಸೈನ್ ಕಾಣಿಯೂರು, ಮಹಮ್ಮದ್ ಆಸೀಫ್ ಬಿನ್ ಜಾಕಿರ್ ಹುಸೈನ್ ಕಾಣಿಯೂರು ಇವರು ತಲೆಮರೆಸಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. ವಶಪಡಿಸಿಕೊಂಡಿರುವಂತಹ ಸೊತ್ತುಗಳ ಹಾಗೂ ವಾಹನದ ಅಂದಾಜು ಮೌಲ್ಯ 6,00,000 ವಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ವಿಭಾಗ, ಮಂಗಳೂರು ಡಾ.ವೈ ಕೆ ದಿನೇಶ್ ಕುಮಾರ್ ಇವರ ಆದೇಶದಂತೆ, ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ ಕೆ ಇವರ ಮಾರ್ಗದರ್ಶನದಲ್ಲಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂದನ. ಎ ಇವರು ತನಿಖೆಯನ್ನು ನಡೆಸುತ್ತಿದ್ದು, ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಭರತ್.ಎ, ಧೀರಜ್.ಎಸ್, ರಾವುತಪ್ಪ ಬೀರದಾರ್, ಅರಣ್ಯ ರಕ್ಷಕರಾದ ಕೆ.ಎನ್ ಜಗದೀಶ, ಪ್ರಶಾಂತ ಮಾಳಗಿ ಹಾಗೂ ವಾಹನ ಚಾಲಕ ಕಿಶೋರ್ ಕುಮಾರ್ ಪಾಲ್ಗೊಂಡಿದ್ದರು.

No Comments

Leave A Comment