Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಅಮರನಾಥ ಮೇಘ ಸ್ಪೋಟದಲ್ಲಿ ಬಂಟ್ವಾಳದ 30 ಮಂದಿ ಸುರಕ್ಷಿತ

ಬಂಟ್ವಾಳ: ಅಮರನಾಥದಲ್ಲಿ ಸಂಭವಿಸಿದ ಮೇಘಸ್ಪೋಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಿಂದ ಯಾತ್ರೆ ಕೈಗೊಂಡ 30 ಮಂದಿಯ ತಂಡ ಅಮರನಾಥಕ್ಕೆ ತಲುಪಿದ್ದು, ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ನಿರ್ದೇಶನದಂತೆ ಬಂಟ್ವಾಳ ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿಯವರು ಯಾತ್ರಿಗಳ ತಂಡದ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಇನ್ನು 28 ಕಿ.ಮೀ. ಕ್ರಮಿಸಿದರೆ ಯಾತ್ರಾ ಸ್ಥಳವನ್ನು ತಲುಪಲಿದ್ದೇವೆ. ರಕ್ಷಣಾ ಕಾರ್ಯ ನಡೆಸುವ ಸೈನಿಕರು ಉತ್ತಮ ಸಹಕಾರ ನೀಡುತ್ತಿದ್ದು, ನಾಳೆ ಬೆಳಗ್ಗೆ ಅಮರನಾಥದಲ್ಲಿ ದೇವರ ದರ್ಶನ ಸಿಗುವ ನಿರೀಕ್ಷೆ ಇದೆ ಎಂದು ಯಾತ್ರಾ ತಂಡ ವಿಡಿಯೋ ಮೂಲಕ ತಿಳಿಸಿದೆ.

No Comments

Leave A Comment