ಧರ್ಮಸ್ಥಳ : ಈ ಬಾರಿ ರಾಜ್ಯಸಭೆಗೆ ರಾಜ್ಯದಿಂದ ನಾಮ ನಿರ್ದೇಶನಗೊಂಡ ಧರ್ಮಸ್ಥಳದ ಧರ್ಮಾಧಿಕಾರಿಯವರದ ವೀರೇಂದ್ರ ಹೆಗ್ಡೆ. ಆರೋಗ್ಯ, ಶಿಕ್ಷಣ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಇವರು ಮಾಡುತ್ತಿರುವ ಮಹತ್ವದ ಕಾರ್ಯವನ್ನು ಗುರುತಿಸಿ ಇವರಿಗೆ ಈ ಸ್ಥಾನವನ್ನ ನೀಡಲಾಗಿತ್ತು.
ಈ ಬಗ್ಗೆ ಮಾತನಾಡುತ್ತ ಧರ್ಮಸ್ಥಳದ ಧರ್ಮಾಧಿಕಾರಿಯವರು ”ಇದರಲ್ಲಿ ಯಾವುದೇ ಉತ್ಸಾಹದ ರಾಜಕಾರಣವಿಲ್ಲ, ಈ ಮೂಲಕ ದೇಶ ಸೇವೆ ಮಾಡುವ ಅವಕಾಶ ದೊರಕಿದೆ”.
“ನನ್ನೊಂದಿಗೆ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇನ್ನೂ ಮೂವರು ಮಹನೀಯರನ್ನು ಆಯ್ಕೆ ಮಾಡಿದ್ದಾರೆ. ತಮ್ಮ ತಮ್ಮ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ದೇಶಕ್ಕೆ ಪಸರಿಸುವುದು ಇದರ ಉದ್ದೇಶ. ಇದಕ್ಕಾಗಿ ಅವಕಾಶ ಕಲ್ಪಿಸಿದ ಪ್ರಧಾನಿಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ತಿಳಿಸಿದರು.