Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿನ 94ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ದೀಪ ಪ್ರಜ್ವಲನೆಯೊ೦ದಿಗೆ ವಿದ್ಯುಕ್ತ ಚಾಲನೆ.......ಡಿ.2ರ ಶುಕ್ರವಾರದ೦ದು ಪುತ್ತಿಗೆ ಮಠದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಬಾಳೆಮುಹೂರ್ತ ಕಾರ್ಯಕ್ರಮವು 8ಗ೦ಟೆಗೆ ಪುತ್ತಿಗೆ ಮಠದ ಆವರಣದಲ್ಲಿ ಜರಗಲಿದೆ...

ಜಪಾನ್ ಮಾಜಿ ಪ್ರಧಾನಿ ಶಿಂಜೊ ಅಬೆ ಹತ್ಯೆ

ಟೋಕಿಯೊ: ಜಪಾನ್ ಮಾಜಿ ಪ್ರಧಾನ ಮಂತ್ರಿ ಶಿಂಜೊ ಅಬೆ ನಿಧನರಾಗಿದ್ದಾರೆ. ಅವರ ಮೇಲೆ ಇಂದು ಶುಕ್ರವಾರ ಬೆಳಗ್ಗೆ ಪೂರ್ವ ಜಪಾನ್ ನ ನಾರಾ ನಗರದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿತ್ತು.

ಕುತ್ತಿಗೆ, ಎದೆಭಾಗ ಸೇರಿದಂತೆ ಭೀಕರವಾಗಿ ದಾಳಿಗೀಡಾಗಿ ರಕ್ತಸ್ರಾವವಾಗಿ ಹೃದಯ ಸ್ತಂಭನಕ್ಕೊಳಗಾಗಿದ್ದ ಶಿಂಜೊ ಅಬೆಯವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಇಂದು ಮಧ್ಯಾಹ್ನ ಜಪಾನ್ ನ ಎನ್ ಎಚ್ ಕೆ ವರ್ಲ್ಡ್ ನ್ಯೂಸ್ ಅಧಿಕೃತವಾಗಿ ಘೋಷಿಸಿದೆ.

ಶಿಂಜೊ ಅಬೆಯವರ ನಿಧನಕ್ಕೆ ವಿಶ್ವದ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ.

ಕ್ಯೋಟೋ ಸಮೀಪದ ನಾರಾ ನಗರದಲ್ಲಿ ಶುಕ್ರವಾರ ಭಾಷಣ ಮಾಡುವಾಗ ಶಿಂಜೋ ಅಬೆ ಅವರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಜಪಾನ್‌ನ ಎನ್‌ಎಚ್‌ಕೆ ವರ್ಲ್ಡ್ ನ್ಯೂಸ್ ಅನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಜಪಾನ್​ನಲ್ಲಿ (Japan) ಚುನಾವಣಾ ಪ್ರಚಾರದಲ್ಲಿ (Election Camaign) ಭಾಗಿಯಾಗಿದ್ದ ಶಿಂಜೋ ಅವರು ಭಾಷಣ (Speech) ಮಾಡುತ್ತಿರುವಾಗಲೇ ಅವರ ಮೇಲೆ ಗುಂಡು ಹಾರಿಸಲಾಗಿತ್ತು. ಮಾಜಿ ಪ್ರಧಾನಿ ಗುಂಡು ತಗುಲಿ ನೆಲಕ್ಕೆ ಕುಸಿಯುತ್ತಿರುವ ವಿಡಿಯೋ (Video) ಹಾಗೂ ಫೋಟೋಗಳು ವೈರಲ್ (Viral) ಆಗಿದ್ದವು. ಶುಕ್ರವಾರ ಬೆಳಗ್ಗೆ ಘಟನೆ ನಡೆದಿದ್ದು ಅವರನ್ನು ಆಸ್ಪತ್ರೆಗೆ (Hospital) ದಾಖಲಿಸಲಾಗಿತ್ತು. ಶಿಂಜೋ ಅವರು ಭಾರತದ ಜೊತೆ ಉತ್ತಮ ಒಡನಾಟವನ್ನು ಇಟ್ಟುಕೊಂಡಿದ್ದರು.

ಲಿಬರಲ್ ಡೆಮಾಕ್ರಟಿಕ್ ಪಕ್ಷದ ಮೂಲಗಳೂ ಶಿಂಜೋ ಅಬೆ ಸಾವನ್ನು ದೃಢಪಡಿಸಿವೆ ಎಂದು ಕ್ಯೋಟೋ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಜಪಾನ್‌ನ ಸುದೀರ್ಘ ಸೇವೆ ಸಲ್ಲಿಸಿದ ಪ್ರಧಾನ ಮಂತ್ರಿ ಅಬೆ ಅವರು ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿ 2020 ರಲ್ಲಿ ರಾಜೀನಾಮೆ ನೀಡಿದ್ದರು. ಅವರು 2006-07 ಮತ್ತು 2012-20 ರವರೆಗೆ ಎರಡು ಬಾರಿ ಜಪಾನ್‌ನ ಪ್ರಧಾನಿಯಾಗಿದ್ದರು. ಅವರ ನಂತರ ಯೋಶಿಹಿಡೆ ಸುಗಾ ಮತ್ತು ನಂತರ ಫ್ಯೂಮಿಯೊ ಕಿಶಿಡಾ ಅವರು ಅಧಿಕಾರ ವಹಿಸಿಕೊಂಡರು.

ಜಪಾನ್‌ನ ಸಂಸತ್ತಿನ ಮೇಲ್ಮನೆಗೆ ಭಾನುವಾರದ ಚುನಾವಣೆಗೆ ಮುನ್ನ ಪಶ್ಚಿಮ ಜಪಾನಿನ ನಗರವಾದ ನಾರಾದಲ್ಲಿ ಪ್ರಚಾರ ಭಾಷಣದ ವೇಳೆ ಇಂದು ಬೆಳಿಗ್ಗೆ 11.30 ಕ್ಕೆ (ಸ್ಥಳೀಯ ಕಾಲಮಾನ) ಗುಂಡೇಟಿನಿಂದ ಕುಸಿದು ಬಿದ್ದ 67 ವರ್ಷದ ಅಬೆ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

No Comments

Leave A Comment