ಮೈದುಂಬಿದ ನೀರಿರು ಹರಿಯುತ್ತಿದೆ ಮಣಿಪಾಲದ ಅರ್ಬಿ ಫಾಲ್ಸ್ ನಲ್ಲಿ …
ಮಣಿಪಾಲ ಇಂಡಸ್ಟ್ರಿಯಲ್ ಏರಿಯಾದ ಮೂಲಕ ವೈಷ್ಣವಿ ದುರ್ಗಾ ದೇವಸ್ಥಾನದ ಬಳಿಯಲ್ಲಿರುವ ಈ ಅರ್ಬಿ ರ್ಫಾಲ್ಸ್ ಇದೀಗ ಸತತ ಮಳೆ ಬಂದಿರುವ ಹಿನ್ನೆಲೆಯಲ್ಲಿ ಈ ಫಾಲ್ಸ್ ಮೈದುಂಬಿ ಹರಿಯುತ್ತಿದೆ.
ಈ ಫಾಲ್ಸ್ ನ ನೀರು ಬೆಟ್ಟದ ಮಧ್ಯದಲ್ಲಿ ಕಲ್ಲು ಬಂಡೆಗಳ ನಡುವೆ ಇಳಿಜಾರು ಪ್ರದೇಶದಲ್ಲಿ ಬರುವಂತಹ ನೀರಿನ ಜರಿಯ ನೋಟ ಕಣ್ತುಂಬುವಂತದ್ದು. ಕುಟುಂಬ ಸಮೇತರಾಗಿ ಬಂದು. ಇಲ್ಲಿ ಬೋರ್ಗೆರೆವ ಜಲಪಾತದ ವೈಭವವನ್ನು ಕಾಣಬಹುದು.. ಈಗ ಸೂಕ್ತ ಕಾಲವಾಗಿದೆ ಪರ್ಕಳದ ಮೂಲಕವೂ ಮುಂದೆ ಸಾಗಿ 80ನೇ ಬಡೆದು ಬೆಟ್ಟು ಪಂಚಾಯತ್ ನ ಹಿಂಬದಿ ರಸ್ತೆಯಲ್ಲಿ ಚಲಿಸಿ ಮುಂದಕ್ಕೆ ಸಾಗಿ ಮಣೆಪಾಲ ಇಂಡಸ್ಟ್ರಿಯಲ್ ಏರಿಯಾಕ್ಕೆ ಹೋಗುವ ದಾರಿಯಲ್ಲಿಯೂ ಕೂಡ ಸಂಚರಿಸಿ ಈ ಜಲಪಾತದ ವೈಭವ ಕಾಣಬಹುದು.
ಈ ಫಾಲ್ಸ್ ಗೆ ಬರಲು ಉತ್ತಮ ರಸ್ತೆಯ ವ್ಯವಸ್ಥೆ ಇದೆ. ಎರಡು ಕಡೆಯಿಂದ ಈ ಜಲಪಾತಕ್ಕೆ ಸಂಪರ್ಕಿಸುವ ರಸ್ತೆಇದೆ ಎಂದು ಸಾಮಾಜಿಕ ಕಾರ್ಯಕರ್ತರುಗಳಾದ ಗಣೇಶ್ ರಾಜ್ ಸರಳೇಬೆಟ್ಟು, ರಾಜೇಶ್ ಪ್ರಭು ಪರ್ಕಳ ತಿಳಿಸಿದ್ದಾರೆ .
ಪ್ರವಾಸಿಗರು ಬರುವವರು ಪಕ್ಕದಲ್ಲಿ ದೇವಸ್ಥಾನ ಇರುವುದರಿಂದ ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನ ಕೊಡಬೇಕೆಂದು ವಿನಂತಿಸಿದ್ದಾರೆ.