Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಹಾಜಿ ಅಬ್ದುಲ್ಲಾ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

ಉಡುಪಿ: ನಗರ ಹಾಜಿ‌ ಅಬ್ದುಲ್ಲಾ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಪ್ರಸಂಗ ಇಂದು ನಡೆದಿದೆ.

ಉಡುಪಿಯ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಯಲ್ಲಿ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ.27  ವರ್ಷದ ಅಂಕೋಲ‌ ಮೂಲದ ಸುನೀತಾ ಎನ್ನುವ ಮಹಿಳೆಗೆ ಸಿಸೇರಿಯನ್ ಹೆರಿಗೆ ಮಾಡಿಸಲಾಗಿದ್ದು ತಾಯಿ ಮಕ್ಕಳು ಅರೋಗ್ಯವಂತರಾಗಿದ್ದಾರೆ ಎಂದು ಮಾಹಿತಿ ತಿಳಿಯಲಾಗಿದೆ.

ಮಹಿಳೆಗೆ ಇದು ಪ್ರಥಮ‌ ಹೆರಿಗೆಯಾಗಿದ್ದು,ತ್ರಿವಳಿ ಮಕ್ಕಳನ್ನು ಕಂಡು ಸುನೀತಾ ದಂಪತಿಗಳು ಸಂಭ್ರಮಿಸಿದ್ದಾರೆ.

ಸರಕಾರಿ‌ ಮಹಿಳಾ ಮತ್ತು ಮಕ್ಕಳ ಅಸ್ಪತ್ರೆಯ  ಡಾ.ಕವಿಶಾಭಟ್ ,ಡಾ.ರಜನಿ ಕಾರಂತ್ ,ಡಾ, ಸೂರ್ತನಾರಾಯಣ,ಡಾ,ಗಣಪತಿ ಹೆಗಡೆ ಹಾಗೂ ಡಾ.ಮಹಾದವ ಭಟ್ ವೈದರುಗಳ ತಂಡ ತ್ರಿವಳಿ ಮಕ್ಕಳ ಹೆರಿಗೆ ಯಶಸ್ವಿಯಾಗುವ ನಿಟ್ಟಿನಲ್ಲಿ ಕೈ ಜೋಡಿಸಿದ್ದಾರೆ‌ ಎಂದು ತಿಳಿದು ಬಂದಿದೆ.

No Comments

Leave A Comment