Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಶೆಡ್ ಮೇಲೆ ಗುಡ್ಡ ಕುಸಿತ : ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ

ಬಂಟ್ವಾಳ: ಭಾರೀ ಮಳೆಯಿಂದಾಗಿ ಶೆಡ್ ಮೇಲೆ ಗುಡ್ಡ ಕುಸಿದಿದ್ದ ಘಟನೆ ಬುಧವಾರ ಸಂಜೆ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ ಮುಕ್ಕುಡದಲ್ಲಿ ನಡೆದಿದೆ.

 ಹೆನ್ರಿ ಕಾರ್ಲೊ ಅವರ ಮನೆಯ ಬಳಿಯ ಶೆಡ್ ನಲ್ಲಿ ಉಳಿದುಕೊಂಡು ರಬ್ಬರ್ ತೋಟಗಳಲ್ಲಿ ಕೆಲಸ ಮಾಡುತ್ತಿದ್ದ ಐವರ ಪೈಕಿ ನಾಲ್ವರು ಗುಡ್ಡ ಜರಿದು ಶೆಡ್ ನೊಳಗೆ ಸಿಲುಕಿಕೊಂಡಿದ್ದರು. ಅದರಲ್ಲಿ ಮೂವರನ್ನು ಜೆಸಿಬಿ ಮೂಲಕ ರಕ್ಷಣೆ ಮಾಡಿದ್ದು, ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದ. ರಕ್ಷಿಸಲ್ಪಟ್ಟ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟರಲ್ಲಿ ಇಬ್ಬರು ಕಾರ್ಮಿಕರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ತಡರಾತ್ರಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

 ಪಾಲಕ್ಕಾಡು ನಿವಾಸಿ ವಿಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಸ್ಥಿತಿಯಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದ ಕೊಟ್ಟಾಂ ನಿವಾಸಿ ಬಾಬು ಹಾಗೂ ಸಂತೋಷ್ ಅಲಪುರ ಮೃತಪಟ್ಟ ದುರ್ಧೈವಿಗಳು. ಕಣ್ಣೂರು ನಿವಾಸಿ ಜಾನ್ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

No Comments

Leave A Comment