Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಮಂಗಳೂರು: ಮುಂದುವರೆದ ಮಳೆಯ ಆರ್ಭಟ – ವಸತಿ ಪ್ರದೇಶಕ್ಕೆ ನುಗ್ಗಿದ ನೀರು, ಹಲವೆಡೆ ಹಾನಿ

ಮಂಗಳೂರು:ಜು 05. ಜಿಲ್ಲೆಯಾದ್ಯಂತ ರಾತ್ರಿಯಿಂದ ಮಳೆಯ ಆರ್ಭಟ ಜೋರಾಗಿದ್ದು, ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಇಂದು ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದ್ದು, ವಸತಿ ಪ್ರದೇಶಕ್ಕೆ ನೀರು ನುಗ್ಗಿ ಹಲವೆಡೆ ಹಾನಿ ಸಂಭವಿಸಿದೆ.

ನಗರದ ಕುಲಶೇಖರದ ಬಜ್ಜೋಡಿಯಲ್ಲಿ ಕ್ಲಾಡಿ ಲೋಬೊ ಎಂಬವರಿಗೆ ಸೇರಿದ ವರ್ಕ್ ಶಾಪ್ ಗೆ ಮಳೆ ನೀರು ನುಗ್ಗಿದ್ದು, ಬೆಳ್ಳಂಬೆಳಗ್ಗೆ ಚರಂಡಿ ನೀರು ನುಗ್ಗಿದ್ದರಿಂದ ಸಿಬ್ಬಂದಿ ತಮ್ಮ ವಸ್ತುಗಳನ್ನು ರಕ್ಷಿಸಿಕೊಳ್ಳಲು ಪರದಾಡುವಂತಾಗಿದೆ.

ಇನ್ನು ಬಿಕರ್ನಕಟ್ಟೆಯಲ್ಲಿರುವ ಜೆರಾಲ್ಡ್ ಲೋಬೋ ಎಂಬವರ ಮನೆಗೆ ಕಾಂಪೌಡ್ ಕುಸಿದು ಬಿದಿದ್ದು, ಮನೆಗೆ ಹಾನಿಯಾಗಿದೆ.

ಬಿಜೆಪಿ ದ.ಕ ಜಿಲ್ಲೆಯ ಕಚೇರಿ ‌ಮುಂದುಗಡೆಯಿಂದ ಅಲೋಶಿಯಸ್ ಪ.ಪೂ ಕಾಲೇಜು ಕಡೆ ಹೊಗಲು ಇರುವ ಕಚ್ಚಾ ರಸ್ತೆ ಕೈಬರ್ ಪಾಸ್ ಮೇಲ್ಗಡೆ ಕೋರ್ಟ್ ರಸ್ತೆ ಇದ್ದು, ಅದರಲ್ಲಿ ಭೂಕುಸಿತ ಆರಂಭಿಕ ಹಂತದಲ್ಲಿ ಇದ್ದು, ವಕೀಲರು, ಪೋಲಿಸ್, ಹಾಗೂ ಸಾರ್ವಜನಿಕ ಸಾವಿರಾರು ಜನ ವಾಹನದ ಹಾಗೂ ನಡೆದು ಓಡಾಡುವ ಸ್ಥಳವಾಗಿದ್ದು, ದೊಡ್ಡದಾದ ದುರಂತವಾಗುವ ಸೂಚನೆ ಕಾಣುತ್ತಿದ್ದು ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

No Comments

Leave A Comment