Log In
BREAKING NEWS >
ಉಡುಪಿ ನಗರದಲ್ಲಿ ರಿಕ್ಷಾ ಮೀಟರ್ ಕನಿಷ್ಠದರ ರೂ.40/-ಫಿಕ್ಸ್:ಕಿ.ಮೀಟರ್ ಗೆ ರೂ.20/-ಜಾರಿಗೆ ಕ್ಷಣಗಣನೆ…

ಚಿಕಾಗೋದಲ್ಲಿ ಗುಂಡಿನ ದಾಳಿಗೆ – 6 ಮಂದಿ ಮೃತ್ಯು, 24ಕ್ಕೂ ಅಧಿಕ ಜನರಿಗೆ ಗಾಯ

ಚಿಕಾಗೋ, ಜು 05 . ಯುಎಸ್‌ನ ಚಿಕಾಗೋ ಉಪನಗರದಲ್ಲಿ ನಡೆಯುತ್ತಿದ್ದ ಪರೇಡ್‌ನ ವೇಳೆ ಗುಂಡಿನ ದಾಳಿಯಲ್ಲಿ ಆರು ಮಂದಿ ಮೃತಪಟ್ಟು, 24 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಸ್ವಾತಂತ್ರ್ಯೋತ್ಸವದ ಆಚರಣೆ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ಗುಂಡು ಹಾರಿಸಿದ್ದರಿಂದ ಪರೇಡ್‌ನಲ್ಲಿ ಭಾಗವಹಿಸುವವರು ಇದ್ದಕ್ಕಿದ್ದಂತೆ ಭಯಭೀತರಾಗಿ ಓಡಿಹೋಗಿದ್ದು, ಪಾದಚಾರಿ ಮಾರ್ಗದಲ್ಲಿ ಕುಳಿತು ಮೆರವಣಿಗೆಯನ್ನು ವೀಕ್ಷಿಸುತ್ತಿದ್ದರು. ಗುಂಡಿನ ಸದ್ದು ಕೇಳಿ ಬರುತ್ತಿದ್ದಂತೆ ಇಡೀ ಚಿತ್ರಣವೇ ಬದಲಾಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಇನ್ನು ಗುಂಡಿನ ದಾಳಿ ನಡೆದ ಘಟನೆಯಲ್ಲಿ ಆರು ಮಂದಿ ಮೃತಪಟ್ಟಿದ್ದು, ಗಾಯಗೊಂಡ 24 ಜನರನ್ನು ಹೈಲ್ಯಾಂಡ್ ಪಾರ್ಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳೀದು ಬಂದಿದೆ.

No Comments

Leave A Comment