ಉಡುಪಿ: ದ್ವಿಚಕ್ರ ವಾಹನದ ಮೇಲೆ ಮಗುಚಿ ಬಿದ್ದ ಲಾರಿ – ಸವಾರ ಸ್ಥಳದಲ್ಲೇ ಸಾವು
ಉಡುಪಿ, ಜು 05.ದ್ವಿಚಕ್ರ ವಾಹನದ ಮೇಲೆ ಲಾರಿಯೊಂದು ಮಗುಚಿಬಿದ್ದ ಪರಿಣಾಮ , ಸವಾರ ಯುವಕ ಲಾರಿಯಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಪಡುಬಿದ್ರಿ ಪೇಟೆಯಲ್ಲಿ ಜು.5 ರ ಮಂಗಳವಾರ ನಡೆದಿದೆ.
ಮೃತ ಬೈಕ್ ಸವಾರನನ್ನು ಸಂಶುದ್ದೀನ್ ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಸಂಭವಿಸಿದ್ದು, ಪರಿಣಾಮ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿದೆ. ಅಪಘಾತಕ್ಕೀಡಾದ ವಾಹನ ಕ್ರೈನ್ ಮೂಲಕ ತೆರವುಗೊಳಿಸಲಾಗಿದೆ.