Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಬೆಳ್ಳಂಪಳ್ಳಿ ಎಷ್ಟೇಮಳೆ ನೀರು ತುಂಬಿದರು ಇಂಗುತಿರುಗುವುದು ಬೆಟ್ಟು ಗದ್ದೆ!!!*

ಉಡುಪಿಯ ಬೆಳ್ಳಂಪಳ್ಳೀಯ ನಡುಮನೆಯ ದಿವಾಕರ ಶೆಟ್ಟಿಯವರ ಬೆಟ್ಟು ಗದ್ದೆಯಲ್ಲಿ ಮಳೆನೀರು ತುಂಬಿದರೂ ಕ್ಷಣಾರ್ಧದಲ್ಲಿ ನೀರು ಖಾಲಿಯಾಗುತ್ತದೆ.ಮಳೆ ನೀರು ತುಂಬಿದ ಕ್ಷಣಾರ್ಧದಲ್ಲಿ ನೀರು ಗದ್ದೆಯಲ್ಲಿ ಮಾಯವದಂತೆ ಗೋಚರಿಸುತ್ತದೆ ಕಳೆದ ವರ್ಷ ಬೆಳ್ಳಂಪಳ್ಳಿ ಭೂತರಾಜ ಸನ್ನಿಧಿಯ ಕಾಂಕ್ರೀಟ್ ರಸ್ತೆಯ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ಕಲ್ಲು ಚಪ್ಪಡಿ ಕುಸಿದು. ಆ ಭಾಗದಲ್ಲಿ ಗುಹಾಸಮಾಧಿ ಪತ್ತೆಯಾಗಿತ್ತು.

ಅನತಿ ದೂರದಲ್ಲಿ ದಿವಾಕರ ಶೆಟ್ಟಿ ಅವರ ಮನೆ ಇದೆ ಮನೆಯ ಪಕ್ಕದಲ್ಲಿ ನಾಗಬನವೂಇದೆ ಮನೆಯ ಪಕ್ಕದಲ್ಲಿಯೇ ಬೆಟ್ಟುಗದ್ದೆ ಇದ್ದು
ಕಳೆದ ವರ್ಷ ಉಳುಮೆ ಮಾಡುವಾಗ.. ನೀರು ಎತೇಚ್ಛವಾಗಿ ಇಂಗುತ್ತಿದ್ದನ್ನು ಗಮನಿಸಿದ ದಿವಾಕರ್ ಶೆಟ್ಟರು ಹಂಚು ಮತ್ತು ಗದ್ದೆಯ ಮಣ್ಣನ್ನು ಸುತ್ತಲೂ ಸುತ್ತುವರಿದು ತಮ್ಮ ಗದ್ದೆಯಲ್ಲಿ ನೀರುಒಳಮಯೈ ಹರಿಯದಂತೆ ಮಾಡಿದ್ದಾರೆ. ಇದೀಗ ಈ ಬಾರಿಯೂ ಕೃಷಿ ಚಟುವಟಿಕೆಗೆ ಸಿದ್ದರಾದಾಗ ಬೆಟ್ಟುಗದ್ದೆಯಲ್ಲಿ ಕೃಷಿ ಮಾಡಲು ನೀರನ್ನು ತಡೆಹಿಡಿಯಲು ಹಂಚನ್ನು ಇಟ್ಟು ಮಣ್ಣು ಬೆರೆಸಿದ್ದಾರೆ.. ಮಳೆನೀರು ನಿಲ್ಲುವಂತೆ ಮಾಡಿದ್ದಾರೆ .

ಈ ಬಾರಿಯೂಕಟ್ಟೆತೆಗೆದರೆ ಯಥೇಚ್ಛವಾಗಿ ನೀರು ಒಳಮೈ ಪ್ರವೇಶಿಸುತ್ತದೆ. ಒಳಮೈ ಹೋದ ನೀರು ಗೋಚರಿಸುವುದಿಲ್ಲ.. ಇಲ್ಲಿಯೂ ಸಹ ಗುಹಾಸಮಾದಿರುವ ಲಕ್ಷಣಗಳು ಕಂಡುಬಂದಿದೆ.. ಅನತಿ ದೂರದ ಕೆಳ ಪ್ರದೇಶದಲ್ಲಿರುವ ಗದ್ದೆಗಳಿಗೆ ಭೇಟಿ ನೀಡಿದರೆ ಈಬೆಟ್ಟುಗದ್ದೆಯ ಕೆಸರುನೀರು ಹರಿಯುವುದನ್ನು ಕಳೆದ ವರ್ಷ ಗಮನಿಸಿದ್ದಾರೆ. ಎಂದು ದಿವಾಕರ್ ಶೆಟ್ಟಿ ತಿಳಿಸಿದ್ದಾರೆ.

ಬೆಳ್ಳಂಪಳ್ಳಿ ಭೂತರಾಜನ ಸಾನಿಧ್ಯದ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಬೆಳ್ಳಂಪಳ್ಳಿ ಅವರು. ಮಾಹಿತಿ ನೀಡಿದಾಗ ಸ್ಥಳಕ್ಕೆ ಭೇಟಿ ನೀಡಿದಸಾಮಾಜಿಕ ಕಾರ್ಯಕರ್ತ ಗಣೇಶ ರಾಜ್ ಸರಳೇಬೆಟ್ಟು. ರಾಜೇಶ್ ಪ್ರಭು ಪರ್ಕಳ ಜೊತೆಗಿದ್ದು ಪರಿಶೀಲಿಸಿ ಮಳೆಯ ನೀರು ಸರಾಗವಾಗಿ ಒಳಮೈ ಹರಿಯುವುದನ್ನು ಗಮನಿಸಿದ್ದಾರೆ. ಈ ಸಂದರ್ಭದಲ್ಲಿ ದಿವಾಕರ್ ಶೆಟ್ಟಿ. ಪತ್ನಿ ಆಶಾಲತಾ ಡಿ,ಶೆಟ್ಟಿ, ಬೆಳ್ಳಂಪಳ್ಳಿ ಹೊಸ ಒಕ್ಕಲು ಮನೆ ಉಷಾ ಕುಂದರ್ ಜೊತೆಗಿದ್ದು ಸಹಕರಿಸಿದರು.

No Comments

Leave A Comment