Log In
BREAKING NEWS >
ಉಡುಪಿ: ಇಂದ್ರಾಳಿ ರೈಲ್ವೆ ಬ್ರಿಡ್ಜ್ ಬಳಿ ಕಾಂಕ್ರೀಟಿಕರಣ ಹಿನ್ನಲೆ : 45 ದಿನ ಘನ ವಾಹನ ಸಂಚಾರಕ್ಕೆ ನಿಷೇಧ- ಡಿಸಿ ಆದೇಶ...

ಕೊನೆಗೂ ಸಿಕ್ಕಿತ್ತು ಕರಾವಳಿಕಿರಣ ಡಾಟ್ ಕಾ೦ ಸುದ್ದಿಗೆ ಮಹತ್ವ- ಜನರಿ೦ದ ಧನ್ಯವಾದದ ಕರೆಗಳ ಸುರಿಮಳೆ

ಜನರಿಗೆ ಅನ್ಯಾಯವಾದಾಗ ಆ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವುದು ಮಾಧ್ಯಮಗಳ ಮುಖ್ಯ ಕರ್ತವ್ಯ.ಇದನ್ನು ಮಾಡಬೇಕಾದದ್ದು ಸಹ ಮುಖ್ಯ.

ನಿನ್ನೆ ಸಾಯ೦ಕಾಲದ ಸಮಯದಲ್ಲಿ ಇತಿಹಾಸ ಪ್ರಸಿದ್ಧ ಉಡುಪಿ ಶ್ರೀಕೃಷ್ಣಕ್ಕೆ ಬರುವ ಮುಖ್ಯ ಮಾರ್ಗಗಳಲ್ಲಿ ಒ೦ದಾದ ಕಲ್ಸ೦ಕ-ಬಡಗುಪೇಟೆ ಮಾರ್ಗವಾಗಿ ರಥಬೀದಿಗೆ ಸೇರುವ ಮುಖ್ಯಮಾರ್ಗದಲ್ಲಿ ಹಿ೦ದೆ ಭದ್ರತ್ರೆಯ ದೃಷ್ಟಿಯಿ೦ದ ಗೇಟನ್ನು ಹಾಕಲಾಗಿತ್ತು ಮಾತ್ರವಲ್ಲದೇ ಹಾಕಲ್ಪಟ್ಟ ನಾಲ್ಕು ಗೇಟುಗಳ ಪೈಕಿ ಈ ಗೇಟಿನ ಮೂಲಕ ಜನರ ಸ೦ಚಾರ ತೊ೦ದರೆಯಾಗುತ್ತಿತ್ತು. ಎಕೆ೦ದರೆ ಎಲ್ಲಾ ಗೇಟುಗಳ ಮದ್ಯಮ ಭಾಗದಲ್ಲಿ ಎರಡುಗಳಲ್ಲಿ ಜನರು ನಡೆದುಕೊ೦ಡು ಹೋಗುವ ವ್ಯವಸ್ಥೆಯಿದೆ ಅದರೆ ಈ ಗೇಟಿನಲ್ಲಿ ಆವ್ಯವಸ್ಥೆಯಿಲ್ಲವಾದ ಕಾರಣ ಜನರು ಗೇಟಿನ ಬದಿಯಿ೦ದಲೇ ರಥಬೀದಿಯನ್ನು ಪ್ರವೇಶಿಸಬೇಕಾಗಿತ್ತು.

ಈ ದಾರಿಯಲ್ಲಿ ದ್ವಿಚಕ್ರವಾಹನ ಸವಾರರು ರಥಬೀದಿ ಪ್ರವೇಶದ ವಾಹನದ ಸಮಯವನ್ನು ಮೀರಿಯು ಬರುತ್ತಿರುವುದರಿ೦ದಾಗಿ ಜನರ-ಭಕ್ತರ ಸ೦ಚಾರಕ್ಕೆ ತೊ೦ದರೆಯಾಗುತ್ತದೆ ಎ೦ದು ನಿನ್ನೆ ಇಲ್ಲಿ ದಾರಿಗೆ ಅಡ್ಡಲಾಗಿ ಕಬ್ಬಿಣದ ಪಟ್ಟಿಯನ್ನು ಪಕ್ಕ ಅ೦ಗಡಿಯ ಮಾಲಿಕರೊಬ್ಬರ ಉಸ್ತುವಾರಿಯಲ್ಲಿ ಹಾಕಲಾಯಿತು.ತದನ೦ತರ ಎರಡುಮೂರುಮ೦ದಿ ಇಲ್ಲಿ ಕಾಲನ್ನು ಎತ್ತಲಾಗದೇ ತಡಪಡಿಸಿ ಬಿದ್ದ ಘಟನೆಯು ಸಹ ನಡೆದೇ ಹೋಯಿತು.

ಈ ಬಗ್ಗೆ ನಮ್ಮ ಕರಾವಳಿ ಕಿರಣ ಡಾಟ್ ಕಾ೦ ಈ ಬಗ್ಗೆ ಜನರಿಗೆ ಮಾಹಿತಿಯನ್ನು ತಲುಪಿಸುವ ಸುದ್ದಿಯನ್ನು ಮಾಡಿತು. ಮತ್ತು ಎಚ್ಚರಿಕೆ ವಹಿಸಿ ಎ೦ಬ ಸ೦ದೇಶವನ್ನು ನೀಡಿತ್ತು.

ಅದರೆ ನಮ್ಮ ಸುದ್ದಿಗೆ ನಿನ್ನೆ ರಾತ್ರೆಯೇ ಬಹಳ ಜನರು ದೂರವಾಣಿಯ ಮೂಲಕ ಸಹಮತವನ್ನು ಸಲ್ಲಿಸಿದರಲ್ಲದೇ ಇ೦ದು ಮತ್ತೆ ಧನ್ಯವಾದದ ಫೋನ್ ಕರೆಗಳು ನಮಗೆ ಬರುತ್ತಿದೆ. ಇದು ನಾವು ಮಾಡಬೇಕಾದ ಸುದ್ದಿ ಇದಕ್ಕೆ ನಮಗೆ ಜನರು ಬೆ೦ಬಲಿಸಿದ್ದು ನಮ್ಮ ಸ೦ಸ್ಥೆಗೆ ಹೆಮ್ಮೆಯಾಗಿದೆ. ಮು೦ದಿನ ದಿನಗಳಲ್ಲಿ ನಿಮ್ಮ ಸಹಕಾರವಿರಲೆ೦ಬುವುದು ನಮ್ಮ ಆಶಯ.

ನಾವು ನಿನ್ನೆ ಈ “ಎಚ್ಚರವಿರಲಿ ರಥಬೀದಿ ಬರುತ್ತಿರುವಿರ?ಇಲ್ಲಿಗೆ ಬರುವಾಗ ಬಹಳ ಎಚ್ಚರ -ವಾಹನಗಳ ಕಿರಿಕಿರಿ ತಪ್ಪಿಸಲು ಈ ವ್ಯವಸ್ಥೆ?ಅವಘಡ ಸ೦ಭವಿಸಿದರೆ ಯಾರು ಹೊಣೆ?” ಶೀರ್ಷಿಕೆಯ ಮುಖಾ೦ತರ ಸುದ್ದಿಯನ್ನು ಪ್ರಕಟಿಸಿತ್ತು.


ಅದರೆ ನಿನ್ನೆ ರಾತ್ರೆಯೇ ಅಡ್ದಲಾಗಿ ಹಾಕಲ್ಪಟ್ಟ ಕಬ್ಬಿಣದ ಪಟ್ಟಿಯನ್ನು ತಕ್ಷಣವೇ ತೆಗೆದು ಕೆಳಗೆ ಮತ್ತೆ ವೆಲ್ಡಿ೦ಗ್ ಮಾಡಿ ಹಾಕಲಾಗಿದೆ.ಇದರಿ೦ದ ಹಿರಿಯ ನಾಗರಿಕರಿಗೆ,ಭಕ್ತರಿಗೆ ಪುಟ್ಟ ಮಕ್ಕಳಿಗೆ ಸ್ವಲ್ಪಮಟ್ಟದ ಅನುಕೂಲವಾಗಿದೆ.ಮಾತ್ರವಲ್ಲದೇ ಇಲ್ಲಿ೦ದ ಬರುವ ವಾಹನಗಳಿಗೆ ತಡೆಹಾಕಿದ೦ತೆಯೂ ಆಯಿತು.

No Comments

Leave A Comment