Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಉಡುಪಿ:ಮನೆಗೆ ನುಗ್ಗಿ ಚಿನ್ನಾಭರಣ ಕಳವು ಗೈದ ಆರೋಪಿಗಳ ಬ೦ಧನ

ಉಡುಪಿ:ಪಿರ್ಯಾದಿದಾರರಾದ ಪ್ರಮೀಳಾ ಬಂಗೇರಾರವರು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಅಂಬಾಗಿಲು ಕಕ್ಕುಂಜೆ ಎಂಬಲ್ಲಿ ವಾಸ್ತವ್ಯವಿದ್ದು, ದಿನಾಂಕ 21/01/2022 ರಿಂದ ದಿನಾಂಕ 20/02/2022 ರ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಮನೆಯ ಗೋದ್ರೇಜ್‌ ನಲ್ಲಿಸಿದ್ದ ಬಂಗಾರದ ಸರ-2, ಬಳೆ-2, ಉಂಗುರ-3, ಕಿವಿಯ ಓಲೆ-1ಜೊತೆ, ಬ್ರೆಸ್‌ಲೆಟ್‌-1 ಒಟ್ಟು ಸುಮಾರು 9 ಪವನ್‌ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಒಟ್ಟು ಅಂದಾಜು ರೂಪಾಯಿ 3,15,000/- ಆಗಿದ್ದು, ಮನೆಗೆ ಬರುತ್ತಿದ್ದ ಸಂತೋಷ ಎಂಬಾತನ ಮೇಲೆ ಸಂಶಯ ಇರುವುದಾಗಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆಯಲ್ಲಿರುವುದಾಗಿದೆ.

ಪ್ರಕರಣದಲ್ಲಿ ಆರೋಪಿ ಪತ್ತೆಯ ಬಗ್ಗೆ ವಿಶೇಷ ಕರ್ತವ್ಯದಲ್ಲಿ ಹೋದ ಪ್ರಸಾದ್‌ಕುಮಾರ್‌ ಕೆ. ಪೊಲೀಸ್‌ ಉಪ ನಿರೀಕ್ಷಕರು ತನಿಖೆ-1 ಹಾಗೂ ಸಿಬ್ಬಂದಿಯವರಾದ ಸತೀಶ್, ಕಿರಣ್ ಆರೋಪಿ ಸಂತೋಷ್ ಪೂಜಾರಿಯನ್ನು ಉಡುಪಿ ತಾಲೂಕು ಕೃಷ್ಣ ಮಠದ ಗೀತಾ ಮಂದಿರ ಬಳಿಯಿಂದ ಮತ್ತು ಪ್ರಕರಣದಲ್ಲಿ ಬಾಗಿಯಾಗಿದ್ದ ಆರೋಪಿ ರಾಕೇಶ್ ಪಾಲನ್ ನ್ನು ಉಡುಪಿ ಉಜ್ವಲ್ ಬಾರ್ ಎದುರಿನಿಂದ ವಶಕ್ಕೆ ಪಡೆದು ಆರೋಪಿಗಳಿಂದ 2,18,169/- ರೂಪಾಯಿ ಮೌಲ್ಯದ ಚಿನ್ನಭರಣಗಳನ್ನು ವಶಪಡಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದಲ್ಲಿ ನ್ಯಾಯಾಲಯವು ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಪ್ರಕರಣದಲ್ಲಿ ಆರೋಪಿ ಪತ್ತೆಯ ಬಗ್ಗೆ ಮಾನ್ಯ ಪೊಲೀಸ್‌ ಅಧೀಕ್ಷಕರಾದ ಎನ್‌. ವಿಷ್ಣುವರ್ಧನ್‌, ಐ.ಪಿ.ಎಸ್‌ ರವರ ಆದೇಶದಂತೆ, ಸಿದ್ದಲಿಂಗಪ್ಪ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು, ಸುಧಾಕರ ಸದಾನಂದ ನಾಯ್ಕ್, ಡಿವೈಎಸ್‌ಪಿ ಉಡುಪಿ ರವರ ನಿರ್ದೇರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಪ್ರಮೋದ ಕುಮಾರ್ ಪಿರವರ ಮಾರ್ಗದರ್ಶನದಂತೆ ಪಿ.ಎಸ್‌.ಐ-1 ಮಹೇಶ್ ಟಿ.ಎಮ್, ಪ್ರಸಾದ್‌ಕುಮಾರ್‌ ಕೆ. ಪಿ.ಎಸ್‌.ಐ ತನಿಖೆ-1, ಪಿ.ಎಸ್.ಐ-2 ವಾಸಪ್ಪ ನಾಯ್ಕ್, ಹಾಗೂ ಸಿಬ್ಬಂದಿಯವರಾದ ಎ.ಎಸ್.ಐ ಅರುಣ್ , ಸತೀಶ್ ಬೆಳ್ಳೆ , ಕಿರಣ್, ರವರು ಸಹಕರಿಸಿರುತ್ತಾರೆ.

ಆರೋಪಿತರ ಹೆಸರು ವಿಳಾಸ

1) ಸಂತೋಷ್ ಪೂಜಾರಿ ಪ್ರಾಯ:36 ವರ್ಷ ತಂದೆ: ದಿ:ರಾಘು ಪೂಜಾರಿ, ವಾಸ: “ಅಮ್ಮಕೃಪಾ” ,ಗರಡಿ ದೇವಸ್ಥಾನದ ಹತ್ತಿರ ಕಕ್ಕುಂಜೆ ಗ್ರಾಮ ಶಿವಳ್ಳಿ ಅಂಚೆ ಉಡುಪಿ ಜಿಲ್ಲೆ.

No Comments

Leave A Comment