ಅಕ್ರಮ ಮರಳುಗಾರಿಕೆ : ನದಿಯಲ್ಲಿ ದೋಣಿ ಮಗುಚಿ ಒಬ್ಬ ಕಾರ್ಮಿಕ ಮೃತ್ಯು : ಇಬ್ಬರು ಪಾರು
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಯಾರ್ ಹಾಗೂ ಹರೇಕಳ ಬಳಿ ನೇತ್ರಾವತಿ ನದಿಯಲ್ಲಿ ನಿನ್ನೆ ದೋಣಿ ಮಗುಚಿ ಬಿದ್ದು ಒಬ್ಬ ಕಾರ್ಮಿಕ ನಾಪತ್ತೆಯಾಗಿ, ಇನ್ನಿಬ್ಬರು ಅಪಾಯದಿಂದ ಪಾರಾದ ಘಟನೆ ನಡೆದಿದೆ
ನಾಪತ್ತೆಯಾದ ಕಾರ್ಮಿಕ ಉತ್ತರಪ್ರದೇಶದ ರಾಜ್ (50) ಎಂದು ತಿಳಿಯಲಾಗಿದೆ. ಈತ ಹಾಗೂ ಇತರ ಇಬ್ಬರು ಕಾರ್ಮಿಕರೊಂದಿಗೆ ದೋಣಿಯಲ್ಲಿ ತೆರಳಿ ಮರಳು ತೆಗೆಯುತ್ತಿದ್ದರು, ಆಗ ಈ ಘಟನೆ ಸಂಭವಿಸಿದೆ.
ನೇತ್ರಾವತಿ ನದಿ ತುಂಬಿದ ಕಾರಣ ಅಡ್ಯಾರ್ ಮತ್ತು ಹರೇಕಳ ಹೊಸ ಡ್ಯಾಮ್‌ನಲ್ಲಿ ಗೇಟ್ ತೆಗೆದು ಕೆಳಭಾಗಕ್ಕೆ ನೀರು ಬಿಡಲಾಗುತ್ತಿದೆ. ಶನಿವಾರ ರಾಜ್ ಮತ್ತು ಇತರ ಇಬ್ಬರು ಕಾರ್ಮಿಕರು ಡ್ಯಾಮ್‌ನ ಕೆಳಭಾಗದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದರು. ಈ ಸಂದರ್ಭ ದುರಂತ ಸಂಭವಿಸಿದೆ. ಈ ಭಾಗದಲ್ಲಿ ನಿರಂತರವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆರೋಪ ಕೇಳಿಬರುತ್ತಿವೆ.
ಪೊಲೀಸರು ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಸ್ಥಳೀಯರು ಈ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.