ಕನ್ಹಯ್ಯ ಲಾಲ್ ಹತ್ಯೆ ಪ್ರಕರಣ – ಆರೋಪಿಗಳು 10 ದಿನಗಳ ಕಾಲ ಎನ್ಐಎ ವಶಕ್ಕೆ
ಜೈಪುರ, ಜೂ 02 ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಪುರದ ನ್ಯಾಯಾಲಯವು ಬಂಧಿತ ಎಲ್ಲಾ ಆರೋಪಿಗಳನ್ನು 10 ದಿನಗಳ(ಜುಲೈ 12)ವರೆಗೆ ಎನ್ಐಎ ವಶಕ್ಕೆ ನೀಡಿದೆ.
ಆರೋಪಿಗಳಾದ ರಿಯಾಜ್ ಅಖ್ತೇರಿ, ಘೌಸ್ ಮೊಹಮ್ಮದ್, ಆಸಿಫ್ ಮತ್ತು ಮೊಹಸೀನ್ ಈ ನಾಲ್ವರನ್ನು ಕನ್ಹಯ್ಯ ಲಾಲ್ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದ್ದು, ರಾಷ್ಟ್ರೀಯ ತನಿಖಾ ದಳ ಹಾಗೂ ಭಯೋತ್ಪಾದನ ನಿಗ್ರಹ ಪಡೆಯಿಂದ ಇನ್ನೂ 10 ದಿನಗಳ ಕಾಲ ಆರೋಪಿಗಳ ವಿಚಾರಣೆ ನಡೆಯಲಿದೆ.
ನೂಪುರ್ ಶರ್ಮಾ ಹೇಳಿಕೆ ಬೆಂಬಲಿಸಿದ್ದ ಉದಯಪುರದ ಟೈಲರ್ ಕನ್ಹಯ್ಯ ಲಾಲ್ ಅವರನ್ನು ಜೂನ್ 28 ರಂದು ಕತ್ತು ಸೀಳಿ ಭೀಕರ ಹತ್ಯೆ ಮಾಡಲಾಗಿತ್ತು.