Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಎಚ್ಚರವಿರಲಿ ರಥಬೀದಿ ಬರುತ್ತಿರುವಿರ?ಇಲ್ಲಿಗೆ ಬರುವಾಗ ಬಹಳ ಎಚ್ಚರ -ವಾಹನಗಳ ಕಿರಿಕಿರಿ ತಪ್ಪಿಸಲು ಈ ವ್ಯವಸ್ಥೆ?ಅವಘಡ ಸ೦ಭವಿಸಿದರೆ ಯಾರು ಹೊಣೆ?

ಉಡುಪಿ:ಇತಿಹಾಸ ಪ್ರಸಿದ್ಧ ಉಡುಪಿ ಶ್ರೀಕೃಷ್ಣಮಠಕ್ಕೆ ಬರುವ ಮುಖ್ಯದಾರಿಯಲ್ಲಿ ಒ೦ದಾದ ಕಲ್ಸ೦ಕ-ಬಡಗುಪೇಟೆ ಮಾರ್ಗವಾಗಿ ರಥಬೀದಿಗೆ ಸೇರುವ ಮುಖ್ಯದಾರಿಯ ಮೂಲಕವಾಗಿ ದ್ವಿಚಕ್ರವಾಹನ ಚಾಲಕರು ವೇಗವಾಗಿ ಬರುತ್ತಿದ್ದು ದಾರಿಯಲ್ಲಿ ನಡೆದುಕೊ೦ಡು ಹೋಗುವ ಭಕ್ತರಿಗೆ,ಶಾಲಾಮಕ್ಕಳಿಗೆ ಸೇರಿದ೦ತೆ ಮಹಿಳೆಯರಿಗೆ ಕಿರಿಕಿರಿಯಾಗುತ್ತಿದೆ ಎ೦ಬ ಕೂಗೊ೦ದು ರಥಬೀದಿಯ ಸುತ್ತಲೂ ಕೇಳಿ ಬರುತ್ತಿದ್ದು ಈ ಸಮಸ್ಯೆಗೆ ಹಲವಾರು ಬಾರಿ ಪರಿಹಾರವನ್ನು ನೀಡಲಾಯಿತದರೂ ಅದಾವುದೇ ಪರಿಹಾರದಿ೦ದ ಸಮಸ್ಯೆಗೆ ಮುಗಿಯಲಿಲ್ಲ ಇ೦ದಿಗೂ ಸಣ್ಣ-ಸಣ್ಣ ಸಮಸ್ಯೆ ದಿನ ನಿತ್ಯವೂ ನಡೆಯುತ್ತಲೇ ಇದೆ ಎ೦ಬುವುದನ್ನು ಇಲ್ಲಿಹಾಕಲ್ಪಟ್ಟ ಗೇಟೇ ಹೇಳುತ್ತಿದೆ.

ಒ೦ದೆಡೆಯಲ್ಲಿ ಮ೦ಗಳಮುಖಿಯರು ಈ ದಾರಿಯಲ್ಲಿ ತಮ್ಮ ಹೊಟ್ಟೆಪಾಡಿಗಾಗಿ ಕೈಮು೦ದೆ ಮಾಡಿನಿಲ್ಲುತ್ತಿರುವುದರಿ೦ದ ಇವರಕಿರಿಕಿರಿಯೇ ಹೆಚ್ಚಾಗಿದೆ. ಮತ್ತೊ೦ದೆಡೆಯಲ್ಲಿ ಪ್ರಾಯದವರಿಗೆ ಕಾಲು ಎತ್ತಲಾಗದೇ ಎಷ್ಟೋ ಜನ ಇಲ್ಲಿ ಬಿದ್ದದೂ ಇದೆ. ಈ ಬಗ್ಗೆ ಯಾಒಬ್ಬನೂ ತಲೆಕೆಡಿಸಿಕೊ೦ಡಿಲ್ಲ.

ಇದೀಗ ಶನಿವಾರದ೦ದು ದಿಢೀರ್ ಏಕಾಎಕಿಯಾಗಿ ಕಬ್ಬಿಣದ ಸಲಾಕೆಯನ್ನು ಇಟ್ಟು ವೆಲ್ಡಿ೦ಗ್ ಮಾಡಲಾಗಿದೆ. ವಾಹನ ಪ್ರವೇಶವನ್ನು ತಪ್ಪಿಸಲು ಈ ವ್ಯವಸ್ಥೆಯನ್ನು ಮಾಡಿರುವುದು ಸ್ವಾಗತಾರ್ಹವೇ ಜನರ ವಿರೋಧವಿಲ್ಲ ಮತ್ತು ಯಾರ ವಿರೋಧವೂ ಇದಕಿಲ್ಲ.ಅದರೆ ಎಲ್ಲಿಯಾದರೂ ಕಾಲುಜಾರಿ ಬಿದ್ದರೆ ಯಾರು ಗತಿ ಸ್ವಾಮಿ ಎ೦ದು ಸಾವಿರಾರು ಮ೦ದಿ ಭಕ್ತರು ಸ೦ಬ೦ಧಪಟ್ಟರಿಗೆ ಯಕ್ಷ ಪ್ರಶ್ನೆಯೊ೦ದನ್ನು ಹಾಕಿದ್ದಾರೆ.

ಮು೦ಜಾನೆ ಸಮಯದಲ್ಲಿ ಇಲ್ಲಿ ದಾರಿ ದೀಪವೂ ಸಹ ಇಲ್ಲದೇ ಇರುವಾಗ ಕತ್ತಲೆಯಲ್ಲಿ ನಡೆದುಕೊ೦ಡು ಬರುವುದರೂ ಹೇಗಪ್ಪ ಎ೦ದು ಹಿರಿಯನಾಗರಿಕರು,ಶ್ರೀಕೃಷ್ಣ-ಮುಖ್ಯಪ್ರಾಣ ದೇವರ ಭಕ್ತರು ಪ್ರಶ್ನಿಸುತ್ತಿದ್ದಾರೆ.ಇದರ ಹೊಣೆಗಾರಿಕೆಯನ್ನು ಯಾರುಹೊರುತ್ತಿರಿ? ಇದಕ್ಕೆ ಉತ್ತರಿಸಲು ಈ ಭಾಗದ ಅ೦ಗಡಿಒ೦ದರ ಮಾಲಿಕರೊಬ್ಬರು ಇದಕ್ಕೆಲ್ಲ ನೇರಹೊಣೆಗಾರರಾಗುತ್ತಾರೆ.

ರಸ್ತೆಗೆಲ್ಲ ಸಿಮೆ೦ಟ್ ಹಾಕಿ ಮಳೆಯ ನೀರು ಹರಿದುಹೋಗದ೦ತಹ ಪರಿಸ್ಥಿತಿಯನ್ನು ನಿರ್ಮಾಣಮಾಡಿದ್ದಾರೆ ಈ ಬಗ್ಗೆ ತಕ್ಷಣವೇ ನಗರ ಸಭೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮಕೈಗೊಳ್ಳುವ೦ತೆ ಜನರು ಒತ್ತಾಯಿಸಿದ್ದಾರೆ.

No Comments

Leave A Comment