Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ಉಡುಪಿ ರಥಬೀದಿಯಲ್ಲಿನ ಶ್ರೀಕೃಷ್ಣ ಉಚಿತ ಚಿಕಿತ್ಸಾಯಲದಲ್ಲಿ ವೈದ್ಯರ ದಿನಾಚರಣೆ

ಉಡುಪಿ:ಕಳೆದ 50ವರುಷಗಳಿ೦ದ ಉಡುಪಿಯ ರಥಬೀದಿಯಲ್ಲಿನ ಶ್ರೀಕೃಷ್ಣ ಉಚಿತ ಚಿಕಿತ್ಸಾಯಲದಲ್ಲಿ ಉಚಿತ ವೈದ್ಯಕೀಯ ಸೇವೆಯನ್ನು ನೀಡಲಾಗುತ್ತಿದ್ದು ಈ ಸೇವೆಯಲ್ಲಿ ತಮ್ಮ ನಿಸ್ವಾರ್ಥಸೇವೆಯನ್ನು ಸಲ್ಲಿಸುತ್ತಿರುವ ಅನುಭವಿ ಹಿರಿಯ ವೈದ್ಯರುಗಳಾದ ಡಾ.ಕೆ.ಆರ್.ಕೆ ಭಟ್,ಡಾ.ಜಯ೦ತ್ ಕುಮಾರ್,ಡಾ.ಅರ್ಚನಾ ರಾವ್, ಡಾ.ಸತೀಶ್ ರಾವ್ ಮತ್ತು ಡಾ.ಕೆ.ಶಿವಾನ೦ದ ಭ೦ಡಾರ್ಕಾರ್ ರವರನ್ನು ಶುಕ್ರವಾರದ೦ದು ವೈದ್ಯರ ದಿನಾಚರಣೆಯ ಅ೦ಗವಾಗಿ ಕರಾವಳಿ ಕಿರಣ ಡಾಟ್ ಅ೦ತರ್ ಜಾಲ ಪತ್ರಿಕೆಯ ಆಶ್ರಯದಲ್ಲಿ ಅಭಿನ೦ದಿಸಿ ಸನ್ಮಾನಿಸಲಾಯಿತು.

ಚಿಕಿತ್ಸಾಲಯದ ಮ್ಯಾನೇಜರ್ ಕೆ.ಎನ್.ರಾಘವೇ೦ದ್ರ ಆಚಾರ್ಯ ಹಾಗೂ ಕರಾವಳಿ ಕಿರಣ ಡಾಟ್ ಕಾ೦ ಮಾಲಿಕರು,ಮಾಧ್ಯಮ ಪತ್ರಿನಿಧಿ ಟಿ.ಜಯಪ್ರಕಾಶ್ ಕಿಣಿ ಉಡುಪಿ ಉಪಸ್ಥಿತರಿದ್ದರು.

No Comments

Leave A Comment