Log In
BREAKING NEWS >
ಜನವರಿ 29ರಿ೦ದ 31ರವರೆಗೆ ಅಮ್ಮು೦ಜೆ ಶ್ರೀದಾಮೋದರ ದೇವಸ್ಥಾನದ ಪ್ರತಿಪ್ರತಿಷ್ಠಾ ದಶಮನೋತ್ಸವ ಕಾರ್ಯಕ್ರಮದ ಸ೦ಭ್ರಮವು ಜರಗಲಿದೆ-30ರ ಸೋಮವಾರದ೦ದು ಶ್ರೀದಾಮೋದರ ದೇವರಿಗೆ ಚಿನ್ನದ ಕವಚ ಸಮರ್ಪಣಾ ಕಾರ್ಯಕ್ರಮವು ಜರಗಲಿದೆ....

ಮಂಗಳೂರು: ಮಳೆ ಹಿನ್ನೆಲೆ-ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಮಂಗಳೂರು: ಜೂ 30. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಜುಲೈ 1ರ ಶುಕ್ರವಾರ ರಜೆ ನೀಡಿ ದ.ಕ. ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಅವರು ಆದೇಶಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆಯು ಶುಕ್ರವಾರದ ಬೆಳಗ್ಗೆ 8.30ರವರೆಗೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ. ಆದರೆ ನಾಳೆಯೂ ಧಾರಾಕಾರ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಎಲ್ಲಾ ಅಂಗನವಾಡಿ ಕೇಂದ್ರ, ಶಾಲೆ-ಪದವಿ ಪೂರ್ವ ಮತ್ತು ಪದವಿ

ಕಾಲೇಜುಗಳಿಗೆ ಜಿಲ್ಲಾಡಳಿತವು ರಜೆ ಘೋಷಣೆ ಮಾಡಿದೆ.ವಿಪರೀತ ಮಳೆ ಮತ್ತು ಜಿಲ್ಲೆಯ ವಿವಿಧೆಡೆ ಕೃತಕ ನೆರೆ ಉಂಟಾದ ಹಿನ್ನೆಲೆಯಲ್ಲಿ ಗುರುವಾರ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿತ್ತು.

No Comments

Leave A Comment