Log In
BREAKING NEWS >
ಅಪಾರ ಭಕ್ತಜನಸ್ತೋಮದ ನಡುವೆ ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 122ನೇ ಭಜನಾ ಸಪ್ತಾಹ ಮಹೋತ್ಸವದ "ರ೦ಗಪೂಜೆ" ಸ೦ಪನ್ನ...ಏಕಾದಶಿಯ ಪ್ರಯುಕ್ತ ಸೋಮವಾರದ೦ದು ಸ೦ಜೆ 5ಗ೦ಟೆಗೆ ನಗರಭಜನೆ ಆರ೦ಭ...

ಕಲೆ ತಾನಾಗಿ ಅರಳಿದರೆ ಅದೂ ಎ೦ದಿಗೂ ಶಾಶ್ವತ-ಅ೦ತಹ ಕಲೆಗಾರರೊಬ್ಬರಲ್ಲಿ ಮಾರ್ಪಳ್ಳಿಯ ಮಾಸ್ಟರ್ ವರುಣ್ ಉಪಾಧ್ಯ…

ಕಲೆ ಎಲ್ಲರಲ್ಲಿಯೂ ಬೇಕೆ೦ದರೂ ಹುಟ್ಟಲಾರದು ಮತ್ತು ಹುಟ್ಟಿದರೂ ಅದು ಬೆಳೆಯುತ್ತಲೇ ಶಾಶ್ವತವಾಗಿ ಉಳಿಯುವುದರಲ್ಲಿ ಎರಡು ಮಾತಿಲ್ಲ. ಇ೦ತಹ ಕಲೆಗಾರನಾಗಿರುವುದು ಬೇರಾರಲ್ಲ ಅದುವೇ ನಮ್ಮ ಮಾರ್ಪಳ್ಳಿಯ ಮಾಸ್ಟರ್ ವರುಣ್ ಉಪಾಧ್ಯಾ.

ಮಾರ್ಪಳ್ಳಿಯಲ್ಲಿನ ದೊಡ್ಡ ಉಪಾಧ್ಯ ಕುಟು೦ಬವೊ೦ದರಲ್ಲಿನ ವಿಷ್ಣುಮೂರ್ತಿ ಉಪಾಧ್ಯ ಹಾಗೂ ಶ್ರೀಮತಿ ವ೦ದನಾರವರ ಹಿರಿಯ ಮಗನೇ ಇವರರಾಗಿದ್ದಾರೆ.ತನ್ನ ಹತ್ತನೇ ತರಗತಿಯನ್ನು ಮುಗಿಸಿದ ಇವರು ಇದೀಗ ಉಡುಪಿಯ ಎ೦ ಜಿ ಎ೦ ಕಾಲೇಜಿನ ಪಿಯುಸಿ ವಿದ್ಯಾಭ್ಯಾಸವನ್ನು ನಡೆಸುತ್ತಿದ್ದಾರೆ.

ಇವರು ಯಕ್ಷಗಾನದ ಭಾಗವತಿಕೆ ಮಾತ್ರವಲ್ಲದೇ ವೇಷಧಾರಿಯೂ ಸಹ ಆಗಿರುತ್ತಾರೆ.ಕ್ರಿಕೆಟ್ ಮತ್ತು ಚಿತ್ರಕಲೆಯಲ್ಲಿಯೂ ಇದೀಗ ಇತರ ಚಿತ್ರಕಲೆಗಾರರಿಗೆ ಒ೦ದು ಹೊಸ ಸಾಹಸವನ್ನೇ ತೋರಿಸಿಕೊಟ್ಟಿದ್ದಾರೆ೦ದರೆ ತಪ್ಪಾಗಲಾರದು ಅದೇನೆ೦ದರೆ ಸ್ವತ:ತಮ್ಮ ಬಿಡುವಿನ ವೇಳೆಯಲ್ಲಿ ಪೆನ್ಸಿಲ್ ಕೈಯಲ್ಲಿ ಹಿಡಿದುಕೊ೦ಡು ತಾನು ಯಾವಯಾವ ಮಟ್ಟದಲ್ಲಿ ತನ್ನನ್ನು ತೊಡಗಿಸಿಕೊ೦ಡಿದೆನೆಯೋ ಅದೇ ವಿಷಯದಲ್ಲಿ ಚಿತ್ರವನ್ನು ಬಿಡಿಸುವ ಛಲಗಾರಿಕೆಯಿ೦ದ ಚಿತ್ರವನ್ನು ಬಿಡಿಸುವ ಕಲೆ.

ಕಲೆ ತಾನಾಗಿ ಅರಳಿದರೆ ಅದೂ ಎ೦ದಿಗೂ ಶಾಶ್ವತ. ಅ೦ತಹ ಕಲೆಗಾರರೊಬ್ಬರಲ್ಲಿ ಮಾರ್ಪಳ್ಳಿಯ ಮಾಸ್ಟರ್ ವರುಣ್ ಉಪಾಧ್ಯಎನ್ನುವುದಕ್ಕೇ ಹೆಮ್ಮೆಯಾಗುತ್ತದೆ. ಯಾರ ಬಳಿಯೂ ಈ ಚಿತ್ರಕಲೆಯ ತರಬೇತಿಯನ್ನು ಪಡೆದುಕೊಳ್ಳದೇ ತನ್ನದೇ ಅದ ಶೈಲಿಯಲ್ಲಿ ಚಿತ್ರವನ್ನು ಬಿಡಿಸಲಾರ೦ಭಿಸಿದ್ದಾರೆ.

ಮು೦ದಿನ ದಿನಗಳಲ್ಲಿ ಈ ಕಲೆಯು ಶಾಶ್ವತವಾಗಿ ಬೆಳೆದು ಒಬ್ಬ ಉತ್ತಮ ಚಿತ್ರ ಕಲೆಗಾರರಾಗಿ ಬೆಳೆಯಲಿ ಎ೦ಬುದು ನಮ್ಮ ಆಶಯವಾಗಿದೆ.

No Comments

Leave A Comment