ಕಾಸರಗೋಡು: ಮೀನುಗಾರಿಕಾ ದೋಣಿ ಮಗುಚಿ ಯುವಕ ಸಮುದ್ರ ಪಾಲು ಕಾಸರಗೋಡು, ಜೂ 26. ಮೀನುಗಾರಿಕಾ ದೋಣಿ ಮಗುಚಿ ಓರ್ವ ಸಮುದ್ರ ಪಾಲಾದ ಘಟನೆ ಹೊಸದುರ್ಗದ ತುರುತ್ತಿ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದ್ದು, ಇಬ್ಬರು ಈಜಿ ದಡ ಸೇರಿದ್ದಾರೆ. ಸೂರಜ್ (28) ನಾಪತ್ತೆಯಾದವರು. ನಾಪತ್ತೆ ಯಾದವನಿಗಾಗಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳು, ಪರಿಸರವಾದಿಗಳು ಹಾಗೂ ಕಂದಾಯ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಇನ್ನು ನಾಡ ದೋಣಿಯಲ್ಲಿ ಮೀನುಗಾರಿಕೆ ಗೆ ತೆರಳಿದ ಸಂದರ್ಭದಲ್ಲಿ ಘಟನೆ ನಡೆದಿದೆ. Share this:TweetWhatsAppEmailPrintTelegram