Log In
BREAKING NEWS >
ಅಪಾರ ಭಕ್ತಜನಸ್ತೋಮದ ನಡುವೆ ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 122ನೇ ಭಜನಾ ಸಪ್ತಾಹ ಮಹೋತ್ಸವದ "ರ೦ಗಪೂಜೆ" ಸ೦ಪನ್ನ...ಏಕಾದಶಿಯ ಪ್ರಯುಕ್ತ ಸೋಮವಾರದ೦ದು ಸ೦ಜೆ 5ಗ೦ಟೆಗೆ ನಗರಭಜನೆ ಆರ೦ಭ...

ಮಂಗಳೂರು: ಬೈಕ್‌ಗಳ ಢಿಕ್ಕಿ-ವಿದ್ಯಾರ್ಥಿ ಸಾವು, ಓರ್ವ ಗಂಭೀರ

ಮಂಗಳೂರು, ಜೂ 26. ಒಂದೇ ಕಾಲೇಜಿನ ವಿದ್ಯಾರ್ಥಿಗಳಿಬ್ಬರ ಬೈಕ್‌ಗಳು ಪರಸ್ಪರ ಢಿಕ್ಕಿಯಾಗಿ ಓರ್ವ ಮೃತಪಟ್ಟು ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಮೂಲ್ಕಿ ವಿಜಯಾ ಕಾಲೇಜು ರಸ್ತೆಯ ಲೇಡೀಸ್ ಹಾಸ್ಟೆಲ್ ಬಳಿ ಶನಿವಾರ ರಾತ್ರಿ ನಡೆದಿದೆ.

ಕಕ್ವ ನಿವಾಸಿ ಮಾನಿಷ್ ಮೃತ ವಿದ್ಯಾರ್ಥಿ. ಕವತ್ತಾರ್‍ ನಿವಾಸಿ ದೀಕ್ಷಿತ್ ಗಂಭೀರ ಗಾಯಗೊಂಡಿದ್ದಾರೆ. ಇಬ್ಬರೂ ವಿಜಯ ಕಾಲೇಜಿನ ಪದವಿ ವಿದ್ಯಾರ್ಥಿಗಳು. ಮಾನಿಷ್ ಮೂಲ್ಕಿ ಕಡೆಯಿಂದ ಹಾಗೂ ದೀಕ್ಷಿತ್ ವಿಜಯ ಕಾಲೇಜು ಕಡೆಯಿಂದ ವೇಗವಾಗಿ ಬರುತ್ತಿದ್ದು, ಹಾಸ್ಟೆಲ್ ಬಳಿ ರಿಕ್ಷಾವನ್ನು ಓವರ್‌ಟೇಕ್ ಮಾಡುವ ವೇಳೆ ಎರಡೂ ಬೈಕ್‌ಗಳು ಮುಖಾಮುಖಿ ಢಿಕ್ಕಿ ಹೊಡೆದಿವೆ. ಢಿಕ್ಕಿಯ ರಭಸಕ್ಕೆ ಎರಡೂ ಬೈಕ್‌ಗಳು ನಜ್ಜುಗುಜ್ಜಾಗಿವೆ.

ಅಪಘಾತ ನಡೆದ ಅರ್ಧ ಗಂಟೆ ಕಾಲ ಯಾವುದೇ ವಾಹನಗಳು ಇಲ್ಲದೆ ಇಬ್ಬರೂ ಸ್ಥಳದಲ್ಲಿಯೇ ನರಳಾಡುತ್ತಿದ್ದರು.ಬಳಿಕ ಆ ರಸ್ತೆಯಾಗಿ ಬಂದ ರಿಕ್ಷಾವೊಂದರಲ್ಲಿ ಸ್ಥಳೀಯ ನಗರ ಪಂಚಾಯತ್ ಸದಸ್ಯ ಬಾಲಚಂದ್ರ ಕಾಮತ್ ಮತ್ತಿಬ್ಬರು ಆಸ್ಪತ್ರೆಗೆ ದಾಖಲಿಸಿದರು.

No Comments

Leave A Comment