Log In
BREAKING NEWS >
ದೆಹಲಿ ಮಹಾನಗರ ಪಾಲಿಕೆ ಆಪ್ ತೆಕ್ಕೆಗೆ; 15 ವರ್ಷಗಳ ಬಿಜೆಪಿ ಆಡಳಿತ ಅಂತ್ಯ, 150ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಆಪ್‌ ಕಮಾಲ್‌...

ಜೂ.25 ಕ್ಕೆ ಕೃಷ್ಣಮೂರ್ತಿ ಅಚಾರ್ಯ ಅಭಿಮಾನಿ ಬಳಗದ ವತಿಯಿಂದ ಉಚಿತ ನೇತ್ರ ಹಾಗೂ ಅರೋಗ್ಯ ತಪಾಸಣಾ ಶಿಜರ

ಉಡುಪಿ ಜೂ.24. ಉಡುಪಿ ಜಿಲ್ಲಾ ಕೆ. ಕೃಷ್ಣಮೂರ್ತಿ ಅಚಾರ್ಯ ಅಭಿಮಾನಿ ಬಳಗದ ವತಿಯಿಂದ ಉಚಿತ ನೇತ್ರ ಹಾಗೂ ಅರೋಗ್ಯ ತಪಾಸಣಾ ಶಿಜರ ಜೂ.25 ರಂದು ಕಡೆಕಾರಿನ ಬಿಲ್ಲವ ಸೇವಾ ಸಂಘದಲ್ಲಿ ಬೆಳಿಗ್ಗೆ 8 ಗಂಟೆಯಿಂದ ನಡೆಯಲಿದೆ.

ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಬಿಲ್ಲವ ಸೇವಾ ಸಂಘ ಕಡೆಕಾರು ಕನ್ನರ್ಪಾಡಿ, ಕರಾವಳಿ ಸ್ಪೋರ್ಟ್ಸ್ ಕ್ಲಬ್ ಕಡೆಕಾರು, ಗ್ರಾಮ ಪಂಚಾಯತ್ ಕಡೆಕಾರು, ಸಮುದಾಯ ವೈದ್ಯಕೀಯ ವಿಭಾಗ ಕೆ.ಎಂ.ಸಿ ಮಣಿಪಾಲ, ಸಾಫಲ್ಯ ಟ್ರಸ್ಟ್ ನ ಪ್ರವರ್ತಕರಾದ ನಿರೂಪಮ ಪ್ರಸಾದ್ ಶೆಟ್ಟಿ ಪ್ರವರ್ತಕರು, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂದತ್ವ ವಿಭಾಗ) ಉಡುಪಿ ಡಾ.ಪಿ., ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್,‌ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ ಇವರ ಸಹಯೋಗದೊಂದಿಗೆ ನಡೆಯುತ್ತಿರುವ ಶಿಬಿರದಲ್ಲಿ ಜೂ.25 ರಂದು ಬೆಳಗ್ಗೆ ಗಂಟೆ 8.00ರಿಂದ ಮಧ್ಯಾಹ್ನ 11.30ರ ವರೆಗೆ ನೋಂದಣಿ ಪ್ರಕ್ರಿಯೆ ನಡೆಯಲಿದ್ದು, ಆರೋಗ್ಯ ತಪಾಸಣೆ ಬೆಳಗ್ಗೆ 9.00ರಿಂದ ನೊಂದಾವಣಿ ಆದ ಎಲ್ಲಾ ವ್ಯಕ್ತಿಗಳ ತಪಾಸಣೆ ಅಗುವವರೆಗೆ ನಡೆಯಲಿದೆ.

ಈ ಶಿಬಿರದಲ್ಲಿ ಕಣ್ಣಿನ ಸಂಪೂರ್ಣ ತಪಾಸಣೆ ನಡೆಸಲಾಗುವುದು, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದವರಿಗೆ ಗೊತ್ತುಪಡಿಸಿದ ದಿನಾಂಕದಂದು ಉಡುಪಿ ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆಗೆ ಆಸ್ಪತ್ರೆಯ ವಾಹನದಲ್ಲಿ ಸಂಪೂರ್ಣ ಉಚಿತವಾಗಿ ಕರೆದುಕೊಂಡು ಹೋಗಿ ಮರುದಿನ ವಾಪಸ್ ಕರೆತಂದು ಬಿಡಲಾಗುವುದು. ಕನ್ನಡಕದ ಅಗತ್ಯವಿರುವವರಿಗೆ ಉಚಿತವಾಗಿ ಕನ್ನಡಕ ನೀಡಲಾಗುವುದು. ಮಾತ್ರವಲ್ಲದೆ ಶಿಜರದಲ್ಲಿ ಇತರ ಸೌಲಭ್ಯಗಳು ಉಚಿತವಾಗಿ ದೊರೆಯಲಿದೆ.

ಬಿ.ಪಿ, ಇಸಿಜಿ, ರಕ್ತಪರೀಕ್ಷೆ, ಕೊಲೆಸ್ಟಾಲ್ ತಪಾಸಣೆ 8.00 ರಿಂದ 9 ಗಂಟೆ ವರೆಗೆ ಹಾಗೂ ಅರ್.ಬಿ. ಎಸ್ (30 ವರ್ಷ ಮೇಲ್ಪಟ್ಟವರಿಗೆಲ್ಲಾ) ತಪಾಸಣೆ ನಡೆಸಲಾಗುವುದು, ಕೊಲೆಸ್ಟಾಲ್ ತಪಾಸಣೆ ಖಾಲಿ ಹೊಟ್ಟೆಗೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9845199597, 9886591952, 9945413992, 9880510603 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಆಯೋಜಕರು ತಿಳಿಸಿದ್ದಾರೆ.

No Comments

Leave A Comment