ಲಯನ್ಸ್ ಕ್ಲಬ್ ಬ್ರಹ್ಮಗಿರಿಯ ಪದಗ್ರಹಣ ಸಮಾರಂಭ-ವಿದ್ಯಾರ್ಥಿಗಳಿಗೆ ಸನ್ಮಾನ
ಉಡುಪಿ:ಇತರರನ್ನು ಸಂತೋಷದಲ್ಲಿ ಇಡುವುದೇ ಅಂತರಾಷ್ಟ್ರೀಯ ಲಯನ್ಸ್ ಕ್ಲಬ್ಬಿನ ಉದ್ದೇಶವಾಗಿದೆ. ವಿಶ್ವ ಕುಟುಂಬ ಜಾಗತಿಕ ಭ್ರಾತೃತ್ವ ಈ ಸಂಸ್ಥೆಯ ಆದರ್ಶ ಸಂದೇಶವಾಗಿದೆ. ಪರಸ್ಪರ ಪ್ರೀತಿ ಸ್ನೇಹ ವಿಶ್ವಾಸಗಳು ಈ ಸಂಸ್ಥೆಯ ಆಧಾರ ಕಂಬಗಳು. ಲಯನ್ಸ್ ಸಂಸ್ಥೆ ಧರ್ಮಾತೀತವಾಗಿ, ಜಾತ್ಯತೀತವಾಗಿ ,ಪ್ರಾಂತ್ಯಾತೀತವಾಗಿ ವಿಶ್ವವ್ಯಾಪಿಯಾದ ಮಹಾನ ಸೇವಾ ಸಂಸ್ಥೆಯಾಗಿ ರೂಪುಗೊಂಡಿದೆ.
ತಾರೀಕು 18ರಂದು ಉಡುಪಿಯ ಟೌನ್ ಹಾಲ್ ನಲ್ಲಿ ಉಪಜಿಲ್ಲಾ ಗವರ್ನರ್ ಡಾಕ್ಟರ್ ಲಯನ್ ನೆರಿ ಕಾರ್ನಿಲಿಯೋ ತಿಳಿಸಿದರು. 2022 -23 ನೇ ಸಾಲಿನ ಅಧ್ಯಕ್ಷರಾದ ಲಯನ್ ಉಮೇಶ್ ನಾಯಕ್, ಕಾರ್ಯದರ್ಶಿ ಗೀತಾ ವಿ ರಾವ್, ಖಜಾಂಚಿ ಲಯನ್ ವಿಜೇತಾ ರೈ ಹಾಗೂ ಇನ್ನಿತರ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸದಸ್ಯರನ್ನು ಉದ್ದೇಶಿಸಿ ಕರೆ ನೀಡಿದರು.
ಈ ಸಂದರ್ಭದಲ್ಲಿ ಈ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 635 ರಲ್ಲಿ 635 ಅಂಕ ಪಡೆದ ಪುನೀತ್ ನಾಯಕ್ ಮಲ್ಪೆ ಗೌರ್ಮೆಂಟ್ ಹೈಸ್ಕೂಲ್, ಕೇದಾರ ನಾಯಕ್ ಒಳಕಾಡು ಶಾಲೆ ಹಾಗೂ ಸೆಕೆಂಡ್ ಪಿಯುಸಿಯಲ್ಲಿ 97 ಪರ್ಸೆಂಟ್ ಪಡೆದ ಕ್ಲಬ್ಬಿನ ಲಿಯೋ ಸದಸ್ಯೆ ಶ್ರೀನಿಧಿ ರಾವ್ ಅವರನ್ನು ಸನ್ಮಾನಿಸಲಾಯಿತು.
ಲಯನ್ ಗಿರೀಶ್ ರಾವ್ ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು. ಗೀತಾ ವಿ ರಾವ ಧನ್ಯವಾದ ಅರ್ಪಿಸಿದರು. ಲಯನ್ ಇಂದಿರಾ ಹೆಗಡೆಯವರು ಕಾರ್ಯಕ್ರಮವನ್ನು ಸಂಯೋಜಿಸಿದ್ದರು.