ತಾಂತ್ರಿಕ ಸಮಸ್ಯೆಯಿಂದ ಅಪಾಯಕ್ಕೆ ಸಿಲುಕಿದ ಸಿರಿಯಾ ಮೂಲದ ಹಡಗು : 15 ಮಂದಿ ನಾವಿಕರ ರಕ್ಷಣೆ
ಉಳ್ಳಾಲ : ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಉಚ್ಚಿಲ ಸೋಮೇಶ್ವರ ಬಳಿ ಸಮುದ್ರದಲ್ಲಿ ಸಿರಿಯಾ ಮೂಲದ ಹಡಗೊಂದು ತಾಂತ್ರಿಕ ಸಮಸ್ಯೆಯಿಂದಾಗಿ ಅಪಾಯಕ್ಕೆ ಸಿಲುಕಿ ಅದರಲ್ಲಿದ್ದ ಮಂದಿಯನ್ನು ರಕ್ಷಿಸಿದ ಘಟನೆ ಇಂದು ಸಂಭವಿಸಿದೆ.
ಈ ಹಡಗಿನಲ್ಲಿ ಸುಮಾರು 15 ಮಂದಿ ನಾವಿಕರಿದ್ದು ಅವರನ್ನು ಕೋಸ್ಟ್ ಗಾರ್ಡ್ ತಂಡ ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ ಎಂದು ತಿಳಿದು ಬಂದಿದೆ.
8000 ಸಾವಿರ ಟನ್ ಉಕ್ಕಿನ ತಂತಿಗಳನ್ನು ಹೊತ್ತ ಹಡಗು ಓಮಾನ್ ನಿಂದ ಈಜಿಪ್ಟ್ ದೇಶಕ್ಕೆ ಸಾಗುತ್ತಿತ್ತು ಉಚ್ಚಿಲ ಸೋಮೇಶ್ವರ ಬಳಿ ಹಡಗಿನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಮುದ್ರದ ಮಧ್ಯೆ ಸಿಲುಕಿಕೊಂಡಿತ್ತು ಎನ್ನಲಾಗಿದೆ.
ಸದ್ಯ ಕೋಸ್ಟ್ ಗಾರ್ಡ್ ತಂಡ ಹಡಗಿನಲ್ಲಿದ್ದ ಎಲ್ಲಾ ಸಿಬಂದಿಗಳನ್ನು ರಕ್ಷಿಸಿದ್ದಾರೆ.ಎಲ್ಲಾರು ಈಗ ಸುರಕ್ಷಿತವಾಗಿ ಇದ್ದಾರೆ ಎಂದು ತಿಳಿಯಲಾಗಿದೆ.