Log In
BREAKING NEWS >
"ಕರಾವಳಿಕಿರಣ ಡಾಟ್ ಕಾ೦"ನ ಎಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ "ಶ್ರೀಅನ೦ತವೃತ"ದ ಶುಭಾಶಯಗಳು...

ನಟ ದಿಗಂತ್ ಸಮ್ಮರ್ ಸಾಲ್ಟ್ ಫ್ಲಿಪ್ ಮಾಡುವ ಯತ್ನದಲ್ಲಿ ಬಿದ್ದು ಕುತ್ತಿಗೆ ಮತ್ತು ಬೆನ್ನಿಗೆ ಗಂಭೀರವಾದ ಗಾಯ

ಬೆಂಗಳೂರು:ಕನ್ನಡ ಚಿತ್ರರಂಗದ ನಟ ದಿಂಗತ್ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಮ್ಮರ್ ಸಾಲ್ಟ್ ಫ್ಲಿಪ್ ಮಾಡುವ ಯತ್ನದಲ್ಲಿ ಬಿದ್ದು ಕುತ್ತಿಗೆ ಮತ್ತು ಬೆನ್ನಿಗೆ ಗಂಭೀರವಾದ ಗಾಯವಾಗಿರುವುದರಿಂದ ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ವೈದ್ಯರು ದಿಗಂತ್ ಅವರನ್ನು ಪರೀಕ್ಷಿಸಿ ಶಸ್ತ್ರ ಚಿಕಿತ್ಸೆಯನ್ನು ಮಾಡುವ ಅವಶ್ಯಕತೆಯಿದೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಗೋವಾಕ್ಕೆ ಕುಟುಂಬದ ಜೊತೆ ತೆರಳಿದ್ದ ದಿಂಗತ್ ಸಮ್ಮರ್ ಸಾಲ್ಟ್ ಫ್ಲಿಂಪ್ (ಬ್ಯಾಕ್ ಫ್ಲಿಂಪ್) ಮಾಡುವ ಯತ್ನದಲ್ಲಿ ಎಡವಿದ್ದಾರೆ. ಹಿಮ್ಮುಖವಾಗಿ ತಲೆಗೆಳಗೆ ಮಾಡಿ ಎಗರುವಾಗ ತಲೆಯ ಭಾಗ ನೆಲಕ್ಕೆ ಬಡಿದು ಕುತ್ತಿಗೆ ಮತ್ತು ಬೆನ್ನಿಗೆ ಗಂಭೀರವಾದ ಗಾಯವಾಗಿದೆ. ದಿಗಂತ್‌ಗೆ ಗಾಯವಾಗುತ್ತಿದ್ದಂತೆ ಕುಂಟುಂಬಸ್ಥರು ಗೋವಾದಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಿದ್ದಾರೆ.

ಗೋವಾದಲ್ಲಿ ದಿಗಂತ್ ಚಿಕಿತ್ಸೆಯನ್ನು ಪಡೆದ ಬಳಿಕ ಗಾಯದ ಗಂಭೀರತೆಯನ್ನು ಅರಿತು ಗೋವಾ ಸಿಎಂ ಪ್ರಮೋದ್ ಸಾವಂತ್‌ಗೆ ಕರೆ ಮಾಡಿ ಹೆಲಿಕಾಪ್ಟರ್ ಮೂಲಕ ಏರ್‌ಲಿಫ್ಟ್‌ಗೆ ಮನವಿಯನ್ನು ಮಾಡಿದ್ದಾರೆ. ಗೋವಾ ಸಿಎಂ ಪ್ರಮೋದ್ ಸಾವಂತ್ ಒಪ್ಪಿಗೆಯ ಬಳಿಕ ಗೋವಾದಿಂದ ನಟ ದಿಗಂತ್‌ನನ್ನು ಏರ್ ಲಿಫ್ಟ್ ಮಾಡಿ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ‌

ಮಣಿಪಾಲ್ ಆಸ್ಪತ್ರೆಯ ವೈದ್ಯರ ಪ್ರಕಾರ :
ಗೋವಾದಿಂದ ಏರ್ ಲಿಫ್ಟ್‌ನಲ್ಲಿ ಬಂದ ದಿಗಂತ್‌ನನ್ನು ಆಂಬ್ಯುಲೆನ್ಸ್‌ನಲ್ಲಿ ಕರೆತಂದು ಮಣಿಪಾಲ್ ಆಸ್ಪತ್ರಗೆ ದಾಖಲು ಮಾಡಲಾಗ. ಮಣಿಪಾಲ್ ಆಸ್ಪತ್ರೆಯ ವೈದ್ಯರು ಈಗಾಗಲೇ ದಿಗಂತ್‌ರನ್ನು ಪರೀಕ್ಷಿಸಿದ್ದಾರೆ. ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಶಸ್ತ್ರ ಚಿಕಿತ್ಸೆಯನ್ನು ಮಾಡುವುದು ಅನಿವಾರ್ಯವಾಗಬಹುದು ಎಂದು ವೈದ್ಯರು ಹೇಳಿದ್ದಾರೆ.

ದಿಗಂತ್ ತನ್ನ ಇನ್ಸ್ಟಾದಲ್ಲಿ ಹಲವಾರು ವಿಡಿಯೋಗಳನ್ನು ಹಾಕಿದ್ದರೆ. ಈ ವಿಡಿಯೋಗಳಲ್ಲಿ ಬ್ಯಾಕ್ ಫ್ಲಿಪ್ ಮಾಡುವ ವಿಡಿಯೋಗಳನ್ನು ಹಾಕಿಕೊಂಡಿದ್ದಾರೆ. ದಿಗಂತ್ ಆಗಿಂದಾಗ್ಗೆ ಬ್ಯಾಕ್ ಪ್ಲಿಂಪ್ ಮಾಡುವ ಅಭ್ಯಾಸವಿತ್ತು ಎನ್ನುವುದು ಈ ಮೂಲಕ ತಿಳಿಯುತ್ತಿದೆ.ಆದರೆ ಈಗ ಅದು‌ ಜೀವಕ್ಕೆ ಆಪತ್ತು ತಂದಿದೆ ಎನ್ನಲಾಗಿದೆ.

No Comments

Leave A Comment