Log In
BREAKING NEWS >
ಮಾರ್ಚ್ 22ರ೦ದು ಚ೦ದ್ರಾಮಾನ ಯುಗಾದಿ ,ಏಪ್ರಿಲ್ 15ರ೦ದು ಸೌರಮಾನ ಯುಗಾದಿ ಹಬ್ಬವು ನಡೆಯಲಿದೆ.ಹಲವಾರು ಗಣ್ಯರು ಯುಗಾದಿ ಹಬ್ಬದ ಶುಭಾಶಯವನ್ನು ಕೋರಿರುತ್ತಾರೆ.....

ಪುತ್ತೂರು: ಹೊಸ ಬಾರ್ ರೆಸ್ಟೋರೆಂಟ್ ಮುಚ್ಚುವಂತೆ ಸ್ಥಳೀಯರ ಆಗ್ರಹ, ಅಬಕಾರಿ ಅಧಿಕಾರಿಯ ವಾಹನಕ್ಕೆ ಘೇರಾವ್

ಪುತ್ತೂರು, ಜೂ 21.ಕಬಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರ ಎಂಬಲ್ಲಿ ತೆರೆಯಲಾಗಿರುವ ಹೊಸ ಬಾರ್ ಮತ್ತು ರೆಸ್ಟೋರೆಂಟ್ ಅನ್ನು ಮುಚ್ಚುವಂತೆ ಸ್ಥಳೀಯರು ಒತ್ತಾಯಿಸಿದ್ದು, ಸೋಮವಾರ ಸ್ಥಳಕ್ಕೆ ಸಮಸ್ಯೆಯನ್ನು ಸ್ಪಷ್ಟಪಡಿಸಲು ಆಗಮಿಸಿದ ಅಬಕಾರಿ ಅಧಿಕಾರಿಯ ವಾಹನವನ್ನು ಸ್ಥಳೀಯರು ಘೇರಾವ್ ಮಾಡಿದ್ದಾರೆ.

ಸಮಾಜ ಸೇವಕ ಸುದರ್ಶನ್ ಸ್ಥಳೀಯರ ನೇತೃತ್ವ ವಹಿಸಿ ಮಾತನಾಡಿದ್ದು, ‘ಮುರಾದ ಜನವಸತಿ ಪ್ರದೇಶದಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಿರುವುದು ತಪ್ಪು. ಈ ಹಿಂದೆ ಪ್ರೀತಂ ಹೆಸರಿನ ಹೊಟೇಲ್ ಕಾರ್ಯನಿರ್ವಹಿಸುತ್ತಿದ್ದು, ಈಗ ಬಾರ್ ಅಂಡ್ ರೆಸ್ಟೋರೆಂಟ್ ನಡೆಸಲು ಅನುಮತಿ ನೀಡಲಾಗಿದೆ. ನಾವು ಈ ಪ್ರದೇಶದ ಸ್ಥಳೀಯರು ಇದನ್ನು ವಿರೋಧಿಸುತ್ತೇವೆ ಎಂದರು.

ಅನೇಕ ಸ್ಥಳೀಯರು ಸುದರ್ಶನ್ ಅವರನ್ನು ಬೆಂಬಲಿಸಿದರು. ಆದರೆ ಕೆಲ ಮದ್ಯಪ್ರಿಯರು ಮುರ ಪಟ್ಟಣದಲ್ಲಿ ಮೊದಲು ಬಾರ್ ಇದ್ದ ಕಾರಣ ಬಾರ್ ಬೇಕು ಎನ್ನುತ್ತಾರೆ.

ಅಬಕಾರಿ ನಿರೀಕ್ಷಕಿ ಸುಜಾತಾ ಮಾತನಾಡಿ, ಅಬಕಾರಿ ಡಿಸಿ ಅನುಮತಿ ಮೇರೆಗೆ ಬಾರ್ ತೆರೆಯಲಾಗಿದೆ. ಉನ್ನತ ಅಧಿಕಾರಿಗಳ ಆದೇಶದಂತೆ ಪರಿಶೀಲನೆಗೆ ಬಂದಿದ್ದೇವೆ. ನಾವು ನಿಮ್ಮ ಅಭಿಪ್ರಾಯವನ್ನು ತಿಳಿಸುತ್ತೇವೆ ಮತ್ತು ಅವರಿಗೆ ಮನವಿ ಮಾಡುತ್ತೇವೆ ಎಂದಿದ್ದಾರೆ.

ಅಬಕಾರಿ ನಿರೀಕ್ಷಕರ ಹೇಳಿಕೆ ಸ್ಥಳೀಯರಿಗೆ ಮನವರಿಕೆಯಾಗಲಿಲ್ಲ, ಕೂಡಲೇ ಬಾರ್ ಮುಚ್ಚಬೇಕು ಎಂದು ಒತ್ತಾಯಿಸಿದ್ದಾರೆ. ಪುತ್ತೂರು ಪೊಲೀಸರು ಆಗಮಿಸಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳೀಯರನ್ನು ಚದುರಿಸಿದ್ದಾರೆ.

No Comments

Leave A Comment