Log In
BREAKING NEWS >
ಜೂ.26ರ೦ದು ಉಡುಪಿ ಶ್ರೀಪುತ್ತಿಗೆ ಮಠದ ೪ನೇ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ ಕಾರ್ಯಕ್ರಮ ಜರಗಲಿದೆ.....

ಯಶಸ್ಸಿನತ್ತ ಸಾಗಿ -ವಿದ್ಯೋದಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಅಭಿನ೦ದನಾ ಸಮಾರ೦ಭದಲ್ಲಿ ಶ್ರೀ ವಿಶ್ವಪ್ರಸನ್ನತೀರ್ಥರು

ಉಡುಪಿ: ಜೂನ್ 21: ಉಡುಪಿಯ ವಿದ್ಯೋದಯ ಟ್ರಸ್ಟ್ (ರಿ.)ನ ಅಧ್ಯಕ್ಷರೂ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಪದವಿ ಪೂರ್ವ ಶಿಕ್ಷಣವು ವೃತ್ತಿ ಶಿಕ್ಷಣದ ಪ್ರಾಥಮಿಕ ಹಂತವಾಗಿದ್ದು ಇಲ್ಲಿ ಗಳಿಸಿರುವ ಉತ್ತಮ ಫಲಿತಾಂಶ ನಿಮ್ಮ ಯಶಸ್ಸಿನ ಪಯಣದ ಮೊದಲ ಹೆಜ್ಜೆಯಾಗಿದೆ. ಯಶಸ್ಸಿನತ್ತ ಸಾಗಿ ಉತ್ತಮ ನಾಗರೀಕರಾಗಿರಿ ಎಂದು ಆಶೀರ್ವಚನ ನೀಡಿದರು. 2021-22 ರ ಸಾಲಿನಲ್ಲಿ ರಾಜ್ಯಮಟ್ಟದ Rankಗಳನ್ನು ಪಡೆದು ಸಾಧನೆಗೈದ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಾ ಶುಭ ಹಾರೈಸಿದರು.

ವಿಜ್ಞಾನದಲ್ಲಿ ಓಂಕಾರ್ ಪ್ರಭು ರಾಜ್ಯ ಮಟ್ಟದಲ್ಲಿ 3ನೇ Rank; ನಿಯತಾ 5 ನೇ Rank, ಲಕ್ಷ್ಮೀ ಪಿ. 7ನೇ Rank , ಪ್ರಣಮ್ಯ ಆಚಾರ್ಯ, ಕೆ.ಎಸ್. ನಿಹಾರಿಕಾ ನವ್ಯಾ ದಿನೇಶ್ ಶೆಟ್ಟಿ 8ನೇ Rank , ಪಾವನ್ ಎ. ಶೆಟ್ಟಿ, ಈಶಾ ಕುಂದರ್, ಅಮರನಾಥ ಭಟ್ ಬಿ. ಮತ್ತು ಚಿನ್ಮಯ ಅಡಿಗ 9 ನೇ Rank  ಹಾಗೂ ಜಾಗೃತಿ ಚಂದ್ರಶೇಖರ್ ಮತ್ತು ಅವನಿ 10ನೇ Rank ಪಡೆದಿದ್ದು ಅಲ್ಲದೇ ವಾಣಿಜ್ಯ ವಿಭಾಗದಲ್ಲಿಮೇಘನಾ ಮೆಂಡನ್ 6 ನೇ Rank , ಹಿರಲ್ ಸುಂದರ್ 7ನೇ Rank, ದರ್ಶನ್ ಆರ್. ಶೆಟ್ಟಿ ಮತ್ತು ಲರಿಸ್ಸಾ ಹೆಜಲ್ ನಜರೆತ್ 8ನೇ Rank ಮತ್ತು ವಿಥಿಕಾ ವಿ. ಶೆಟ್ಟಿ 10ನೇ Rank ಅಲ್ಲದೇ 4 ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು (ಪಿ.ಸಿ.ಎಂ.ಇ. ಯಲ್ಲಿ) ಪಡೆದಿರುವ ಪ್ರಜ್ವಲ್ ಮತ್ತು ಶರಧಿ ಹೆಗಡೆ ಈ ವಿದ್ಯಾರ್ಥಿಗಳಿಗೆವಿದ್ಯೋದಯ ಟ್ರಸ್ಟ್ ನ ಕಾರ್ಯಾಧ್ಯಕ್ಷರಾದ ಶ್ರೀ ಎನ್. ನಾಗರಾಜ ಬಲ್ಲಾಳ್ ಮತ್ತು ಕಾಲೇಜು ಪ್ರಾಂಶುಪಾಲರಾದ ಸಂದೀಪ್ ಕುಮಾರ್ ಶುಭ ಹಾರೈಸಿದರು.ಪ್ರತಿ ಸಾಧಕ ವಿದ್ಯಾರ್ಥಿಗೂ ಅಭಿನಂದನಾಪೂರ್ವಕವಾಗಿ ಪ್ರಶಸ್ತಿ ಫಲಕ ಹಾಗೂ ತಲಾ ರೂ. 5,000 ನಗದು ಪುರಸ್ಕಾರ ನೀಡಲಾಯ್ತು.

ಟ್ರಸ್ಟ್‍ನ ಕಾರ್ಯದರ್ಶಿ ಕೆ. ಗಣೇಶ್ ರಾವ್, ಜೊತೆ ಕಾರ್ಯದರ್ಶಿ ಶ್ರೀಮತಿ ರೂಪಾ ಬಲ್ಲಾಳ್, ಕೋಶಾಧಿಕಾರಿ ಯು. ಪದ್ಮರಾಜ್ ಆಚಾರ್ಯ ಉಪಸ್ಥಿತರಿದ್ದ ಈ ಕಾರ್ಯಕ್ರಮದಲ್ಲಿ ಶ್ರೀಮತಿ ರಂಜನಾ ಕೆ. ಸ್ವಾಗತಿಸಿ, ಶಿವಪ್ರಸಾದ ಭಟ್ ವಂದಿಸಿ, ಶ್ರೀಮತಿ ಅನುಪಮಾ ನಿರ್ವಹಿಸಿದರು.

No Comments

Leave A Comment