ಗೋವಾ ಬೀಚ್ನಲ್ಲಿ ‘ಪಲ್ಟಿ’ ಹೊಡೆಯುವಾಗ ನಟ ದಿಗಂತ್ ಕತ್ತಿಗೆ ಬಲವಾದ ಪೆಟ್ಟು, ಬೆಂಗಳೂರಿಗೆ ಏರ್ಲಿಫ್ಟ್!
ಪಣಜಿ: ಗೋವಾದ ಸಮುದ್ರ ತಟದಲ್ಲಿ ಸೋಮರ್ ಸಾಲ್ಟ್ ಹೊಡೆಯುವ ವೇಳೆ ನಟ ದಿಗಂತ್ ಕುತ್ತಿಗೆಗೆ ತೀವ್ರ ಪೆಟ್ಟು ಬಿದ್ದಿದ್ದು ಅವರನ್ನು ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಗುತ್ತಿದೆ.
ದಿಗಂತ್ ಕುಟುಂಬಸ್ಥರ ಜೊತೆ ಗೋವಾ ಪ್ರವಾಸಕ್ಕೆ ತೆರಳಿದ್ದರು. ಬೀಚ್ ನಲ್ಲಿ ಸಂಭ್ರಮದ ಕ್ಷಣಗಳನ್ನು ಕಳೆಯುವಾಗ ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ. ಸದ್ಯ ಗೋವಾದಲ್ಲಿ ದಿಗಂತ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು ಏರ್ ಲಿಪ್ಟ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಿಗಂತ್ ಅವರನ್ನು ಕುಟುಂಬಸ್ಥರು ಕರೆತರುತ್ತಿದ್ದಾರೆ.
ಕೆಲವು ವರ್ಷಗಳ ಹಿಂದೆ ಚಿತ್ರವೊಂದರ ಚಿತ್ರೀಕರಣದ ವೇಳೆ ದುರ್ಘಟನೆಯೊಂದು ನಡೆದಿತ್ತು. ಈ ಚಿತ್ರೀಕರಣದ ವೇಳೆ ದಿಗಂತ್ ಕಣ್ಣೊಂದಕ್ಕೆ ಹಾನಿಯಾಗಿತ್ತು.