BREAKING NEWS >
ಕರಾವಳಿಯಲ್ಲಿ ಮು೦ದುವರಿದ ಮಳೆ-ತಗ್ಗು ಪ್ರದೇಶಗಳಲ್ಲಿ ಏರುತ್ತಿರುವ ಮಳೆಯ ನೀರಿನ ಮಟ್ಟ....

ಕಾರ್ಕಳ: ಕೋಟೆ ಶ್ರೀ ಮಾರಿಯಮ್ಮ ಕ್ಷೇತ್ರದ ಮುಷ್ಠಿ ಕಾಣಿಕೆ ಸಮರ್ಪಣಾ ಕಾರ್ಯಕ್ರಮಕ್ಕೆ ಸಚಿವೆ ಶಶಿಕಾಲ ಜೊಲ್ಲೆ ಭೇಟಿ

ಕಾರ್ಕಳ, ಜೂ 19. ವಿಜಯನಗರ ಕಾಲಘಟ್ಟದಲ್ಲಿ ಸ್ಥಾಪನೆಗೊಂಡ ಐತಿಹಾಸಿಕ ಹಿನ್ನಲ್ಲೆಯ ಕಾರ್ಕಳ ಕೋಟೆ ಶ್ರೀ ಮಾರಿಯಮ್ಮ ಕ್ಷೇತ್ರದ ಪುನರ್ ನಿರ್ಮಾಣದಿಂದ ಮತ್ತೇ ವಿಜಯನಗರ ಸಾಮಾಜ್ರ್ಯದ ಗತವೈಭವವು ಮೇಳೈಸಲಿದೆ. ಆ ಮೂಲಕ ಧಾರ್ಮಿಕತೆ, ಸಂಸ್ಕೃತಿ, ಕಲೆಯು ಭಾಷೆಯ ಕೊಡುಗೆಯೂ ಮುಂದಿನ ಪೀಳಿಗೆಗೆ ದೊರೆಯುವಂತಾಗಲಿ ಎಂದು ರಾಜ್ಯ ಮುಜರಾಯಿ ಸಚಿವೆ ಶಶಿಕಾಲ ಜೊಲ್ಲೆ ಹೇಳಿದರು.ಕಾರ್ಕ

ಳ ಕೋಟೆ ಶ್ರೀ ಮಾರಿಯಮ್ಮ ನೂತನ ಶ್ರೀ ಕ್ಷೇತ್ರ ನಿರ್ಮಾಣ, ಅಷ್ಟಬಂಧ ಹಾಗೂ ಬ್ರಹಕಲಶೋತ್ಸವದ ಪ್ರಯುಕ್ತವಾಗಿ ಇಂದು ಮುಷ್ಠಿ ಕಾಣಿಕೆ ಸಮರ್ಪಣಾ ಕಾರ್ಯಕ್ರಮದ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದ ಅವರು, ಬದಲಾವಣೆ ಜಗದ ನಿಯಮ. 21ನೇ ಶತಮಾನದಲ್ಲಿ ನಾವೆಲ್ಲರೂ ಜೀವನ ಸಾಗಿಸುತ್ತಿರುವ ಈ ಕಾಲಘಟ್ದವು ಕಲಿಯುಗವಾಗಿದ್ದು, ಸ್ವರ್ಧಾತ್ಮಕತೆಯಿಂದ ಕೂಡಿದರೂ, ಇಡೀ ವಿಶ್ವದಲ್ಲಿ ಭಾರತವು ಶಾಂತಿ,ಸೌಹಾರ್ದತೆಯಿಂದ ಬಾಳಿ ಬದುಕಲು ನಮ್ಮಲ್ಲಿರುವ ಸಾವಿರಾರು ವರ್ಷಗಳ ಹಿಂದೆನ ದೇವರ ಸಾನ್ನಿಧ್ಯವೆನ್ನಿಸಿರುವ ಶ್ರೀ ಕ್ಷೇತ್ರಗಳು. ಸಂಸ್ಕೃತಿಗಳಾಗಿವೆ. ದೇವರ ಸಾನಿಧ್ಯದಲ್ಲಿ ಜಾತಿ, ಧರ್ಮ, ಪಂಧ, ಭೇಧ ಬಾವಗಳೆನ್ನದೇ ನಾವೆಲ್ಲರೂ ಒಂಧೇ ತಾಯಿಯ ಮಕ್ಕಳಂತೆ ಬಾಳಿ ಬದುಕಬೇಕು ಎಂದರು.

ಇನ್ನು ಕಾರ್ಕಳದ ಕೋಟೆ ಶ್ರೀ ಮಾರಿಯಮ್ಮ ನೂತನ ಕ್ಷೇತ್ರ ನಿರ್ಮಾಣಕ್ಕೆ ರಾಜ್ಯ ಸರಕಾರದಿಂದ ರೂ.1 ಕೋಟಿ ಮುಷ್ಠಿಕಾಣಿಕೆ ನೀಡಲಾಗುತ್ತಿದೆ. ಅದರಲ್ಲಿ ಮೊದಲ ಹಂತದಲ್ಲಿ ರೂ.25 ಲಕ್ಷ ಬಿಡುಗಡೆ ಮಾಡಿರುವುದಾಗಿ ಇದೇ ಸಂದರ್ಭದಲ್ಲಿ ರಾಜ್ಯ ಮುಜರಾಯಿ ಸಚಿವೆ ಶಶಿಕಾಲ ಜೊಲ್ಲೆ ಘೋಷಿಸಿದ್ದಾರೆ.

No Comments

Leave A Comment